ಹೊಸ ಕಾರುಗಳ ನೊಂದಣಿ ಕಡಿತಗೊಳಿಸಲಿರುವ ಬೀಜಿಂಗ್

ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 2020 ರ ವೇಳೆಗೆ ನಗರದ ರಸ್ತೆಯ ಮೇಲೆ ಚಲಿಸುವ ಕಾರುಗಳನ್ನು 6.3 ದಶಲಕ್ಷಕ್ಕೆ ನಿಯಂತ್ರಿಸುವ ನಿರ್ಧಾರವನ್ನು ಬೀಜಿಂಗ್ ಸಾರಿಗೆ ಪ್ರಾಧಿಕಾರ ಮಂಗಳವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 2020 ರ ವೇಳೆಗೆ ನಗರದ ರಸ್ತೆಯ ಮೇಲೆ ಚಲಿಸುವ ಕಾರುಗಳನ್ನು 6.3 ದಶಲಕ್ಷಕ್ಕೆ ನಿಯಂತ್ರಿಸುವ ನಿರ್ಧಾರವನ್ನು ಬೀಜಿಂಗ್ ಸಾರಿಗೆ ಪ್ರಾಧಿಕಾರ ಮಂಗಳವಾರ ಕೈಗೊಂಡಿದೆ. 
ಈಗ ಸದ್ಯಕ್ಕೆ ಪ್ರತಿ ತಿಂಗಳು ಲಾಟರಿ ಮೂಲಕ ಹೊಸ ಕಾರುಗಳ ನೊಂದಣಿ ಮಾಡಲಾಗುತ್ತಿದ್ದು 2018 ಕ್ಕೆ ಈ ಸಂಖ್ಯೆಯನ್ನು 150000 ದಿಂದ 100000 ಕ್ಕೆ ಇಳಿಸಲಾಗುವುದು ಎಂದು ಬೀಜಿಂಗ್ ಸಾರಿಗೆ ಮುನ್ಸಿಪಲ್ ಕಮಿಷನ್ ಹೇಳಿದೆ. 
2015 ರ ಅಂತಕ್ಕೆ ಬೀಜಿಂಗ್ ರಸ್ತೆಗಳ ಮೇಲೆ ಓಡಾಡುತ್ತಿರುವ ಕಾರುಗಳ ಸಂಖ್ಯೆ 5.62 ದಶಲಕ್ಷ ಇದೆ. 
1998 ರಿಂದ 2013 ರವೆರೆಗೆ ಕಾರುಗಳ ಸಂಖ್ಯೆ 303% ಏರಿಕೆ ಕಂಡಿದ್ದು, ನಗರದ ಬಹುತೇಕ ರಸ್ತೆಗಳು ವಾಹನ ದಟ್ಟಣೆಯಿಂದ ನರಳುತ್ತವೆ. 
2004 ರಿಂದಲೂ ಈ ತೊಂದರೆಯನ್ನು ನಿವಾರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕ ಸಾರಿಗೆಯ ಉತ್ತೇಜನ, ನೊಂದಣಿ ಲಾಟರಿ, ನೊಂದಣಿ ಸಂಖ್ಯೆಯ ಆಧಾರದ ಮೇಲೆ ಬದಲಿ ದಿನ ವಾಹನ ಓಡಾಟ ಇವುಗಳಲ್ಲಿ ಕೆಲವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com