ಪಾಕಿಸ್ತಾನ ಅಣೆಕಟ್ಟು ಯೋಜನೆಗೆ ಎಡಿಬಿಯಿಂದ ಸಾಲ ನಿರಾಕರಣೆ!

ಪಾಕಿಸ್ತಾನದ ಬಹು ಉದ್ದೇಶಿತ ಡಯಮಿರ್-ಬಾಷಾ ಡ್ಯಾಮ್ ನಿರ್ಮಾಣಕ್ಕೆ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ಸಾಲ ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಸಂಗ್ರಹ ಚಿತ್ರ)
ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನದ ಬಹು ಉದ್ದೇಶಿತ ಡಯಮಿರ್-ಬಾಷಾ ಡ್ಯಾಮ್ ನಿರ್ಮಾಣಕ್ಕೆ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ಸಾಲ ನಿರಾಕರಿಸಿದೆ ಎಂದು ತಿಳಿದುಬಂದಿದೆ.

ಡ್ಯಾ ನಿರ್ಮಾಣ ಸಂಬಂಧ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಡ್ಯಾಂ ನಿರ್ಮಾಣ ಯೋಜನೆಗೆ ಬೃಹತ್ ಪ್ರಮಾಣದ ಹಣದ ಅವಶ್ಯಕತೆ ಇದೆ. ಆದರೆ ಅಷ್ಟು ಪ್ರಮಾಣದ ಸಾಲ ನೀಡಿಕೆಗೆ ಬ್ಯಾಂಕ್ ನಿಯಮಾವಳಿಗಳಲ್ಲಿ ಅವಕಾಶವಿದೆಯೇ ಎಂಬುದು ಪ್ರಶ್ನೆ. ಹೀಗಾಗಿ ಸಾಲ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದು ಎಡಿಬಿ ಅಧ್ಯಕ್ಷ ಟಕೆಹಿಕೋ ನಕಾಓ ಹೇಳಿದ್ದಾರೆ.

ನಿನ್ನೆ ಇಸ್ಲಾಮಾಬಾದ್ ನಲ್ಲಿ ಪಾಕಿಸ್ತಾನದ ವಿತ್ತ ಸಚಿವ ಇಶಾಖ್ ಧರ್ ಅವರು ಎಡಿಬಿ ಅಧ್ಯಕ್ಷ ಟಕೆಹಿಕೋ ನಕಾಓ ಅವರನ್ನು ಭೇಟಿ ಮಾಡಿ ಯೋಜನೆ ಕುರಿತಂತೆ ಚರ್ಚಿಸಿದ್ದರು.

ಈ ಹಿಂದೆ ನಡೆದ ಮಧ್ಯ ಏಷ್ಯಾ ಪ್ರಾದೇಶಿಕ ಆರ್ಥಿಕ ಸಹಕಾರ ಒಕ್ಕೂಟ (CAREC) ಸಭೆಯಲ್ಲಿ ಡಯಮಿರ್-ಬಾಷಾ ಡ್ಯಾಮ್ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಡ್ಯಾ ನಿರ್ಮಾಣ ಯೋಜನೆಗೆ ಬರೊಬ್ಬರಿ 14 ಬಿಲಿಯನ್ ಡಾಲರ್ ಹಣದ ಅವಶ್ಯಕತೆ ಇದ್ದು, ಸಿಂಧೂ ನದಿಗೆ ಅಡ್ಡಲಾಗಿ ಗಲ್ಗಿಟ್ ಹಾಗೂ ಬಾಲ್ಟಿಸ್ತಾನದಲ್ಲಿ ಅಣೆಕಟ್ಟು ಕಟ್ಟಲು ನಿರ್ಧರಿಸಲಾಗಿತ್ತು. ಈ ಮೆಗಾ ಯೋಜನೆಯಿಂದಾಗಿ ಪಾಕಿಸ್ತಾನ 4 500 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com