
ವಾಷಿಂಗ್ ಟನ್: ಅಮೆರಿಕದಲ್ಲಿ ವಿದೇಶಿ ಮೂಲದ ಮಕ್ಕಳ ಜನನ ಹೆಚ್ಚುತ್ತಿದ್ದು, ಮೆಕ್ಸಿಕೋ ಹಾಗೂ ಚೀನಾ ತಾಯಂದಿರ ನಂತರದ ಸ್ಥಾನದಲ್ಲಿ ಭಾರತೀಯ ತಾಯಂದಿರಿದ್ದಾರೆ ಎಂದು ಇತ್ತೀಚಿನ ಅಧ್ಯಯನ ವರದಿ ಹೇಳುತ್ತಿದೆ.
ವಿದೇಶಿ ಮೂಲದ ಮಹಿಳೆಯರು ಅಮೆರಿಕದಲ್ಲಿ ಮಕ್ಕಳಿಗೆ ಜನ್ಮ ನೀಡುತ್ತಿರುವ ಪೈಕಿ ಮೊದಲೆರಡು ಸ್ಥಾನದಲ್ಲಿ ಮೆಕ್ಸಿಕೋ, ಚೀನಾ ಮೂಲದ ತಾಯಂದಿರಿದ್ದರೆ, ಮೂರನೇ ಸ್ಥಾನದಲ್ಲಿ ಭಾರತೀಯ ಮಹಿಳೆಯರಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರದ ಅಧ್ಯಯನ ವರದಿ ತಿಳಿಸಿದೆ.
ಭಾರತೀಯರು ವಿವಾಹವಾಗದೆ ಮಕ್ಕಳನ್ನು ಪಡೆಯುವ ಸಾಧ್ಯತೆ ಶೇ.1 ರಷ್ಟು ಮಾತ್ರವಿದ್ದು, ಅಮೆರಿಕದಲ್ಲಿ ಮಕ್ಕಳನ್ನು ಹೆರುವ ಶೇ.87 ರಷ್ಟು ಭಾರತೀಯ ಮಹಿಳೆಯರು ಡಿಗ್ರಿ ವ್ಯಾಸಂಗ ಪೂರ್ಣಗೊಳಿಸಿರುತ್ತಾರೆ ಹಾಗೂ ಅತ್ಯಧಿಕ ಆದಾಯ( ಯುಎಸ್ ಡಿ 104,500) ಹೊಂದಿರುತ್ತಾರೆ ಎಂದು ಪ್ಯೂ ಅಧ್ಯಯನ ವರದಿ ತಿಳಿಸಿದೆ. 2014 ರಲ್ಲಿ ಅಮೆರಿಕದಲ್ಲಿ 901,245 ವಿದೇಶಿ ಮೂಲದ ಮಕ್ಕಳು ಹುಟ್ಟಿದ್ದು, ಈ ಪೈಕಿ ಮೆಕ್ಸಿಕೋ ಮೂಲದ 287,052 ಮಕ್ಕಳು ಜನಿಸಿದ್ದರೆ ಚೀನಾ ಮೂಲದ 44,829 ಮಕ್ಕಳು ಜನಿಸಿವೆ ನಂತರದ ಸ್ಥಾನದಲ್ಲಿ ಭಾರತವಿದ್ದು ಭಾರತ ಮೂಲದ 43,364 ಮಕ್ಕಳು ಜನಿಸಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.
Advertisement