ಕೆನಡಾದಲ್ಲಿ ಅಕ್ಟೊಬರ್ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸುವ ಮಸೂದೆ

ಕೆನಡಾ ದೇಶದ ಆಂಟಾರಿಯೋ ರಾಜ್ಯದದಲ್ಲಿ ಅಕ್ಟೊಬರ್ ನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸುವ ಮಸೂದೆಯನ್ನು ಮಂಡಿಸಲಾಗಿದೆ.
ಕೆನಡಾದಲ್ಲಿ ಅಕ್ಟೊಬರ್ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸುವ ಮಸೂದೆ
ಕೆನಡಾದಲ್ಲಿ ಅಕ್ಟೊಬರ್ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸುವ ಮಸೂದೆ
Updated on: 

ಟೊರೊಂಟೊ: ಕೆನಡಾ ದೇಶದ ಆಂಟಾರಿಯೋ ರಾಜ್ಯದದಲ್ಲಿ ಅಕ್ಟೊಬರ್ ನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸುವ ಮಸೂದೆಯನ್ನು ಮಂಡಿಸಲಾಗಿದೆ.  

ಪ್ರಾದೇಶಿಕ ಸಂಸತ್ ನಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದ್ದು ವಾರ್ಷಿಕವಾಗಿ ಅಕ್ಟೊಬರ್ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸಲಾಗುತ್ತದೆ. ಕೆನಡಾದ ಆಂಟಾರಿಯೋ ರಾಜ್ಯದಲ್ಲಿ 700,000 ಕ್ಕೂ ಹೆಚ್ಚು ಜನ ಭಾರತೀಯ ಮೂಲದ ಕೆನೆಡಿಯನ್ನರಿದ್ದು, ಈ ಮಸೂದೆಯನ್ನು ಕೆನಡಾದ ಅಭಿವೃದ್ಧಿಗೆ ಶ್ರಮಿಸಿರುವ ಭಾರತೀಯರಿಗೆ ಸಮರ್ಪಿಸಲಾಗಿದೆ ಎಂದು ಸಂಸತ್ ನ ಸದಸ್ಯ ಜೋ ಡಿಕ್ಸನ್ ತಿಳಿಸಿದ್ದಾರೆ.

ಕೆನಡಾದಲ್ಲಿರುವ ಹಿಂದೂಗಳು ಆಂಟಾರಿಯೋದ ಸಮಾಜ, ಆರ್ಥಿಕ, ಧಾರ್ಮಿಕ ರಾಜಕೀಯ, ಸಾಂಸ್ಕೃತಿಕ  ಜೋಡಣೆಗೆ ಅಪಾರ ಕೊಡುಗೆ ನೀಡಿದ್ದಾರೆ. 20 ನೇ ಶತಮಾನದಲ್ಲಿ ಹಿಂದೂಗಳು ಕೆನಡಾಗೆ ವಲಸೆ ಬರಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಶಿಕ್ಷಣ, ವೈದ್ಯಕೀಯ, ಕಾನೂನು, ರಾಜಕೀಯ, ಉದ್ಯಮ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆನಡಾಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಂಸದ ಡಿಕ್ಸನ್ ಹಿಂದುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೆನಡಾದ ಆಂಟಾರಿಯೋವನ್ನು ಜೀವಿಸಲು ಅತ್ಯುತ್ತಮ ನಗರವನ್ನಾಗಿ ಮಾಡಲು ಹಿಂದೂ ಸಮುದಾಯ ಪ್ರಾರಂಭದಿಂದಲೂ ನೆರವು ನೀಡಿದ್ದು, ಹಿಂದೂ ಸಮುದಾಯದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಡಿಕ್ಸನ್ ತಿಳಿಸಿದ್ದಾರೆ. ಅಕ್ಟೊಬರ್ ತಿಂಗಳಲ್ಲಿ ನವರಾತ್ರಿ, ದೀಪಾವಳಿ, ದುರ್ಗಾ ಪೂಜೆ ಸೇರಿದಂತೆ ಹಿಂದೂಗಳು ಹಲವು ಧಾರ್ಮಿಕ ಆಚರಣೆಗಳನ್ನು ನಡೆಸುವುದರಿಂದ ಈ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸಲು ಕೆನಡಾ ಸರ್ಕಾರ ತೀರ್ಮಾನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com