ಜಾನ್ಸನ್ ಪೌಡರ್ ಕಂಪೆನಿಗೆ 70 ಮಿಲಿಯನ್ ಡಾಲರ್ ದಂಡ ಕಟ್ಟಲು ಅಮೆರಿಕ ನ್ಯಾಯಾಲಯ ತೀರ್ಪು

ವರ್ಷಾನುಗಟ್ಟಲೆ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಉಪಯೋಗಿಸಿದ್ದರಿಂದ ತನಗೆ ಕ್ಯಾನ್ಸರ್ ಬಂತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಸೈಂಟ್ ಲೂಯಿಸ್: ವರ್ಷಾನುಗಟ್ಟಲೆ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಉಪಯೋಗಿಸಿದ್ದರಿಂದ ತನಗೆ ಕ್ಯಾನ್ಸರ್ ಬಂತು ಎಂದು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ್ದ ಕ್ಯಾಲಿಫೋರ್ನಿಯಾ ಮಹಿಳೆಗೆ 70 ದಶಲಕ್ಷ ಅಮೆರಿಕನ್ ಡಾಲರ್ ಹಣವನ್ನು ಸೈಂಟಿ ಲೂಯಿಸ್ ತೀರ್ಪುಗಾರರು ಘೋಷಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಮೊಡೆಸ್ಟೊದ ಮಹಿಳೆ ದೆಬೊರಾ ಗಿಯನೆಚ್ಚಿನ್ ಅವರ ದೂರಿನ ವಿಚಾರಣೆ ಸೆಪ್ಟೆಂಬರ್ 26ರಂದು ಆರಂಭಗೊಂಡಿದ್ದು ನಿನ್ನೆಗೆ ಮುಗಿದಿತ್ತು. 2012ರಲ್ಲಿ ಅವರಿಗೆ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಿನ್ನೆ ತೀರ್ಪು ನೀಡಿದ ಸೈಂಟ್ ಲೂಯಿಸ್ ತೀರ್ಪುಗಾರರು ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ತಯಾರಿಕೆಯಲ್ಲಿ ಮತ್ತು ಪ್ರಚಾರದಲ್ಲಿ ಸಂಪೂರ್ಣ ಬೇಜಾವಾಬ್ದಾರಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ ಪರ ವಕೀಲ ಜಿಮ್ ಆಂಡರ್, ಸರಿಯಾದ ತೀರ್ಪು ನೀಡಿದ್ದಾರೆ.ಜಾನ್ಸನ್ ಪೌಡರ್ ನಿಂದ ಅಂಡಾಶಯ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂದು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಬೇಕು ಎಂದು ಹೇಳಿದರು.
ಜಾನ್ಸನ್ ಕಂಪೆನಿಯ ವಕ್ತಾರೆ ಕಾರೊಲ್ ಗುಡ್ ರಿಚ್ ಪ್ರತಿಕ್ರಿಯೆಗೆ ತಕ್ಷಣಕ್ಕೆ ಸಿಗಲಿಲ್ಲ. ಸೈಂಟ್ ಲೂಯಿಸ್ ತೀರ್ಪುಗಾರರಿಗೆ ನೀಡಿದ ಹೇಳಿಕೆಯಲ್ಲಿ ''ಮಹಿಳೆಗೆ ಬಂದಿರುವ ಅಂಡಾಶಯ ಕ್ಯಾನ್ಸರ್ ಬಗ್ಗೆ ನಮಗೆ ತೀವ್ರ ದುಃಖವಿದೆ. ಇಂದಿನ ತೀರ್ಪಿನ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ. ಏಕೆಂದರೆ ವಿಜ್ಞಾನದ ಪ್ರಕಾರವೇ ನಾವು ಜಾನ್ಸನ್ ಬೇಬಿ ಪೌಡರ್ ನ್ನು ಮಾರುಕಟ್ಟೆಗೆ ಬಿಟ್ಟಿದ್ದು ಅದು ಸುರಕ್ಷಿತವಾಗಿದೆ ಎಂದು ಹೇಳಿದೆ'' ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com