ಯೆಮೆನ್ ಮೇಲೆ ಸೌದಿ ಭೀಕರ ವಾಯುದಾಳಿ; ಕನಿಷ್ಟ 60 ಮಂದಿ ಸಾವು

ಹೌತಿ ಬಂಡುಕೋರರ ವಶದಲ್ಲಿರುವ ಯೆಮೆನ್ ಮೇಲೆ ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳು ನಡೆಸಿದ ಭೀಕರ ವಾಯುದಾಳಿಯಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹೊಡೈದಾ ನಗರದ ಜೈಲುಗಳ ಮೇಲೆ ದಾಳಿ (ರಾಯಿಟರ್ಸ್ ಚಿತ್ರ)
ಹೊಡೈದಾ ನಗರದ ಜೈಲುಗಳ ಮೇಲೆ ದಾಳಿ (ರಾಯಿಟರ್ಸ್ ಚಿತ್ರ)

ಅಡೆನ್: ಹೌತಿ ಬಂಡುಕೋರರ ವಶದಲ್ಲಿರುವ ಯೆಮೆನ್ ಮೇಲೆ ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳು ನಡೆಸಿದ ಭೀಕರ ವಾಯುದಾಳಿಯಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ ಎಂದು  ತಿಳಿದುಬಂದಿದೆ.

ಯೆಮೆನ್ ನ ಪಶ್ಚಿಮ ಕರಾವಳಿಯಲ್ಲಿರುವ 2 ಕಾರಾಗೃಹಗಳ ಮೇಲೆ ನಿನ್ನೆ ತಡರಾತ್ರಿ ಸೌದಿ ಮಿತ್ರಪಡೆಗಳು ವಾಯು ದಾಳಿ ನಡೆಸಿದ್ದು, ಈ ಭೀಕರ ದಾಳಿಯಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ.  ಸಾವಿಗೀಡಾದವರಲ್ಲಿ ಕಾರಾಗೃಹದ ಸಿಬ್ಬಂದಿಗಳು ಹಾಗೂ ಶಿಕ್ಷೆಗೊಳಗಾಗಿದ್ದ ಖೈದಿಗಳು ಸೇರಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ದಾಳಿಗೊಳಗಾಗಿರುವ ಎರಡೂ ಕಾರಾಗೃಹಗಳು ಹೌತಿ  ಬಂಡುಕೋರರ ವಶದಲ್ಲಿತ್ತು ಎಂದು ತಿಳಿದುಬಂದಿದೆ.

ಹೌತಿ ಉಗ್ರರ ವಶದಲ್ಲಿರುವ ಹೊಡೈದಾ ನಗರದ ಜೈಲುಗಳ ಮೇಲೆ ದಾಳಿ ಭಾನುವಾರ ಸತತ ಮೂರು ಬಾರಿ ದಾಳಿ ನಡೆಸಲಾಗಿದ್ದು, ಕ್ಷಿಪಣಿ ಮತ್ತು ಬಾಂಬ್ ಗಳಿಂದ ದಾಳಿ ನಡೆಸಲಾಗಿದೆ  ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಿಬ್ಬಂದಿಗಳು ಮತ್ತು ಖೈದಿಗಳು ಸೇರಿದಂತೆ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದು, 38ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ  ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೌತಿ ಬಂಡುಕೋರರ ವಿರುದ್ಧ ಸೌದಿ ಮಿತ್ರಪಡೆಗಳು ನಡೆಸುತ್ತಿರುವ ದಾಳಿ 19ನೇ ತಿಂಗಳಿಗೆ ಮುಂದುವರೆದಿದ್ದು, ಈ ವರೆಗೂ ಸುಮಾರು 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com