ಬಲೂಚ್ ಜನರ ಹೆಣಗಳ ಮೇಲೆ ಪಾಕಿಸ್ತಾನ-ಚೀನಾ ಎಕಾನಾಮಿಕ್ ಕಾರಿಡಾರ್ ನಿರ್ಮಿಸಲಾಗುತ್ತಿದೆ: ಬಿಆರ್ ಪಿ

ಚೀನಾ- ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಗಾಗಿ ಚೀನಾ ಬಲೂಚಿಸ್ತಾನ ವಿಷಯದಲ್ಲಿ ಮಧ್ಯಪ್ರವೇಶ ಮಾಡಿರುವುದಕ್ಕೆ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬಲೂಚ್ ಜನರ ಹೆಣಗಳ ಮೇಲೆ ಪಾಕಿಸ್ತಾನ-ಚೀನಾ ಎಕಾನಾಮಿಕ್ ಕಾರಿಡಾರ್ ನಿರ್ಮಿಸಲಾಗುತ್ತಿದೆ: ಬಿಆರ್ ಪಿ
ಬಲೂಚ್ ಜನರ ಹೆಣಗಳ ಮೇಲೆ ಪಾಕಿಸ್ತಾನ-ಚೀನಾ ಎಕಾನಾಮಿಕ್ ಕಾರಿಡಾರ್ ನಿರ್ಮಿಸಲಾಗುತ್ತಿದೆ: ಬಿಆರ್ ಪಿ
Updated on: 

ಬಲೂಚಿಸ್ತಾನ: ಚೀನಾ- ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್ ಗಾಗಿ ಚೀನಾ ಎಕಾನಾಮಿಕ್ ವಿಷಯದಲ್ಲಿ ಮಧ್ಯಪ್ರವೇಶ ಮಾಡಿರುವುದಕ್ಕೆ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಚೀನಾ ಮಧ್ಯಪ್ರವೇಶವನ್ನು ಬಲೂಚಿಸ್ಥಾನ ರಿಪಬ್ಲಿಕನ್ ಪಕ್ಷ ಖಂಡಿಸಿದ್ದು, ಪಾಕಿಸ್ತಾನ ಚೀನಾದ ಸಹಾಯದೊಂದಿಗೆ ಬಲೂಚಿಸ್ಥಾನದ ಜನರ ಹೆಣಗಳ ಮೇಲೆ ಎಕಾನಾಮಿಕ್  ಕಾರಿಡಾರ್ ನಿರ್ಮಾಣ ಮಾಡಲು ಹೊರಟಿದೆ ಎಂದು ಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳನ್ನು ಹೊರಜಗತ್ತಿಗೆ ತಿಳಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿರುವ ಬಲೂಚಿಸ್ತಾನ ಹೋರಾಟಗಾರರೊಬ್ಬರು, ಕಾಶ್ಮೀರದಲ್ಲಿ ಉಗ್ರ ವಾನಿಯ ಹತ್ಯೆಯನ್ನು ಪಾಕಿಸ್ತಾನ ಮಾಧ್ಯಮಗಳು ಎತ್ತಿ ತೋರಿಸಿದಂತೆ, ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಮೂಲಕ ನಡೆಸುತ್ತಿರುವ ನರಮೇಧಗಳನ್ನು ಭಾರತೀಯ ಮಾಧ್ಯಮಗಳು ಸಹ ತೋರಿಸಬೇಕು ಎಂದು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಮೂಲಕ ಬಲೂಚಿ ರಾಷ್ಟ್ರೀಯವಾದಿಗಳ ಕೂಗನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು, ನರಮೇಧ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಭಾರತದಂತೆ ಇತರ ರಾಷ್ಟ್ರಗಳೂ ಸಹ ಬಲೂಚಿಸ್ಥಾನದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಬೇಕು ಎಂಬ ಒತ್ತಾಯ ವಿಚಾರ ಸಂಕಿರಣದಲ್ಲಿ ವ್ಯಕ್ತವಾಗಿದೆ.

ಪಾಕಿಸ್ತಾನ- ಚೀನಾದೊಂದಿಗೆ ಸೇರಿ ನಿರ್ಮಿಸುತ್ತಿರುವ ಎಕಾನಾಮಿಕ್ ಕಾರಿಡಾರ್,  ಪರಿಸರಕ್ಕೆ ಹಾನಿ ಉಂಟುಮಾಡಲಿದ್ದು, ಸ್ಥಳೀಯ ಜನರಿಗೆ ಯಾವುದೇ ರೀತಿಯಲ್ಲೂ ಸಹಾಯಕವಾಗುವುದಿಲ್ಲ ಎಂದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರುವವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com