ವ್ಯಾಟಿಕನ್'ನಲ್ಲಿಂದು ಮದರ್ ತೆರೆಸಾಗೆ ಸಂತ ಪದವಿ

ತಮ್ಮ ಜೀವಿತಾವಧಿಯನ್ನು ಜನರ ಸೇವೆಗಾಗಿಯೇ ಮುಡಿಪಾಗಿಟ್ಟು, ನೊಂದವರು ಹಾಗೂ ದೀನ ದಲಿತರ ತಾಯಿ ಎಂದೇ ಖ್ಯಾತಿ ಗಳಿಸಿದ್ದ ನೊಬೆಲ್ ಪುರಸ್ಕೃತೆ ಮದರ್ ತೆರೇಸಾ ಅವರಿಗೆ...
ನೊಬೆಲ್ ಪುರಸ್ಕೃತೆ ಮದರ್ ತೆರೇಸಾ
ನೊಬೆಲ್ ಪುರಸ್ಕೃತೆ ಮದರ್ ತೆರೇಸಾ

ವ್ಯಾಟಿಕನ್ ಸಿಟಿ: ತಮ್ಮ ಜೀವಿತಾವಧಿಯನ್ನು ಜನರ ಸೇವೆಗಾಗಿಯೇ ಮುಡಿಪಾಗಿಟ್ಟು, ನೊಂದವರು ಹಾಗೂ ದೀನ ದಲಿತರ ತಾಯಿ ಎಂದೇ ಖ್ಯಾತಿ ಗಳಿಸಿದ್ದ ನೊಬೆಲ್ ಪುರಸ್ಕೃತೆ ಮದರ್ ತೆರೇಸಾ ಅವರಿಗೆ ಸಂತ ಪದವಿ ಪ್ರಧಾನ ಸಮಾರಂಭ ಭಾನುವಾರ ವ್ಯಾಟಿಕನ್ ಸಿಟಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ವಿಶ್ವದಾದ್ಯಂತ ಸುಮಾರು 1 ಲಕ್ಷ ಜನರ ಸಮ್ಮುಖದಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ ನ ಪೋರ್ ಫ್ರಾನ್ಸಿಸ್ ಅವರು ತೆರೆಸಾಗೆ ಸಂತ ಪದವಿ ಪ್ರಧಾನ ಮಾಡಲಿದ್ದಾರೆ. ಸಮಾರಂಭದಲ್ಲಿ ತೆರೆಸಾ ಅವರನ್ನು ಹೊಸ ಸಂತ ಎಂದು ಘೋಷಿಸಲಿದ್ದಾರೆ.

ಭಾರತವನ್ನು ಪ್ರತಿನಿಧಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ 12 ಮಂದಿಯ ನಿಯೋಗ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಎರಡು ರಾಜ್ಯ ಸರ್ಕಾರಗಳ ನಿಯೋಗವು ಈಗಾಗಲೇ ವ್ಯಾಟಿಕನ್ ತಲುಪಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಯಾಗಲಿವೆ.

ಕೋಲ್ಕತಾದ ಬೀದಿ ಬೀದಿಗಳಲ್ಲಿ 45 ವರ್ಷಗಳ ಕಾಲ ಬಡಲವರು ಮತ್ತು ರೋಗಿಗಳ ಸೇವೆ ಮಾಡುತ್ತಾ ಬಂದ ಥೆರೇಸಾ ಅವರ 2 ಪವಾಡಗಳು ಸಾಬೀತಾದ ಕಾರಣ ಅವರನ್ನು ಸಂತರೆಂದು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಪೋಪ್ ಫ್ರಾನ್ಸಿಸ್ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಸಂಭ್ರಮ ಮನೆಮಾಡಿದೆ. ಸಮಾರಂಧಲ್ಲಿ ಸಾಮೂಹಿಕ ಪ್ರಾರ್ಥನೆಗಳು ಸೇರಿದಂತೆ ಇನ್ನಿತರೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com