ಫಿಲಿಪ್ಪೀನ್ಸ್ ಅಧ್ಯಕ್ಷರಿಂದ ಅವ್ಯಾಚ್ಯ ಪದಗಳಿಂದ ನಿಂದನೆ: ಸಭೆ ರದ್ದು ಪಡಿಸಿದ ಬರಾಕ್ ಒಬಾಮಾ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಫಿಲಿಪ್ಪೀನ್ಸ್ ನೂತನ ಅಧ್ಯಕ್ಷ ರೋಡ್ರಿಗೋ ಡುಟಾರ್ಟೆ ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ...
ಬರಾಕ್ ಒಬಾಮಾ
ಬರಾಕ್ ಒಬಾಮಾ

ವೆಂಟಿಯಾನೆ: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಫಿಲಿಪ್ಪೀನ್ಸ್ ನೂತನ ಅಧ್ಯಕ್ಷ ರೋಡ್ರಿಗೋ ಡುಟಾರ್ಟೆ ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಒಬಾಮಾ ಸಭೆಯನ್ನು ರದ್ದು ಮಾಡಿದ್ದಾರೆ.

ಬರಾಕ್ ಒಬಾಮಾ ಅವರನ್ನು ಸಾರ್ವಜನಿಕವಾಗಿ ದುಟಾರ್ಟೆ "ಸೂಳೆ ಮಗ" ಎಂದು ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಒಬಾಮಾ  ಇಂದು ಫಿಲಿಪ್ಫೀನ್ಸ್ ಅಧ್ಯಕ್ಷರ ಜೊತೆ ನಡೆಯಬೇಕಿದ್ದ ಸಭೆಯನ್ನು ರದ್ಧು ಪಡಿಸಿದ್ದಾರೆ.

ಒಬಾಮಾರನ್ನು ಅವ್ಯಾಚ್ಯವಾಗಿ ನಿಂದಿಸಿರುವ ಡುಟಾರ್ಟೆ ತಮ್ಮ ದೇಶದಲ್ಲಿ ನಡೆಯುತ್ತಿರುವ ಹೆಚ್ಚುವರಿ ಕಾನೂನು ಬಾಹಿರ ಕೊಲೆಗಳಿಂದ ದೂರು ವಿರುವಂತೆಂ ಅವರು ಎಚ್ಚರಿಕೆ ನೀಡಿದ್ದಾರೆ.

ಆಸಿಯಾನ್ ಶಂಗ ಸಭೆಯಲ್ಲಿ ಭಾಗವಹಿಸಲು ಲಾವೋಸ್ ಗೆ ಆಗಮಿಸಿದ ದುಟಾರ್ಟೆಯನ್ನು ಫಿಲಿಪ್ಪಿನ್ಸ್ ನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಹತ್ಯೆಗಳ ಬಗ್ಗೆ  ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,  ನೀವು ಗೌರವಯುತರಾಗಿ ಇರಬೇಕು, ಕೇವಲ  ಹೇಳಿಕೆಗಳ ಮೂಲಕ ಪ್ರಶ್ನೆ ಮತ್ತು ಉತ್ತರಗಳನ್ನು ಎಸೆಯುವುದರಿಂದ ದೂರವಿರಿ, ಸೂಳೆ ಮಗನೇ ವೇದಿಕೆಯಲ್ಲಿ ನಿನಗೆ ಶಾಪ ನೀಡುತ್ತೇನೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ವಿರುದ್ಧ ಹರಿಹಾಯ್ದಿದ್ದಾರೆ. ನಾವು ಹಂದಿಗಳ ಹಾಗೆ ಬದಿಯಲ್ಲಿ ಬಿದ್ದು ಒದ್ದಾಡುತ್ತೇವೆ, ನೀವು ಹಾಗೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಈ ಹೇಳಿಕೆ ಒಬಾಮಾ ಕ್ಯಾಂಪ್ ಗೆ ತಲುಪಿದ ಕೂಡಲೇ, ದುಟಾರ್ಟೆ ಜೊತೆ ಮಾತುಕತೆ ನಡೆಸುವುದೇ ಬೇಡವೇ ಎಂಬುದರ ಬಗ್ಗೆ ಚರ್ಚಿಸಲಾಯಿತು. ಜೊತೆಹೆ ಡುಟಾರ್ಟೆ  ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂಬುದರ ಸತ್ಯಾಸತ್ಯತೆ ಪರೀಶಿಲಿಸಲಾಯಿತು. ಡುಟಾರ್ಟೆ ಈ ರೀತಿಯ ಪದ ಪ್ರಯೋಗದಿಂದ ಕ್ರೋಧಗೊಂಡಿರುವ ಒಬಾಮಾ ಸಭೆಯನ್ನು ರದ್ದು ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com