ಬುರ್ಖಾ ಧರಿಸದ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದ ಇಸಿಸ್ ನಿಂದ ಬುರ್ಖಾ ನಿಷೇಧ!

ಬುರ್ಖಾ ಧರಿಸಿದ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಬುರ್ಖಾಧರಿಸುವುದನ್ನೇ ನಿಷೇಧಿಸಿದೆ..!
ಇರಾಕ್ ನಲ್ಲಿ ಬುರ್ಖಾ (ಸಂಗ್ರಹ ಚಿತ್ರ)
ಇರಾಕ್ ನಲ್ಲಿ ಬುರ್ಖಾ (ಸಂಗ್ರಹ ಚಿತ್ರ)
Updated on

ಮೊಸುಲ್: ಬುರ್ಖಾ ಧರಿಸಿದ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಬುರ್ಖಾಧರಿಸುವುದನ್ನೇ ನಿಷೇಧಿಸಿದೆ..!

ಹೌದು..ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಮೂಲಭೂತವಾದಗಳಿಂದಲೇ ಕುಖ್ಯಾತಿ ಪಡೆದಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಅದರ ವಾದಗಳೇ ತಿರುಗುಬಾಣವಾಗಿ ಪರಿಣಮಿಸಲು  ಆರಂಭಿಸಿದೆ. ಈ ಹಿಂದೆ ಬುರ್ಖಾ ಧರಿಸಿಲ್ಲ ಎಂದು ಅಮಾಯಕ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಉಗ್ರ ಸಂಘಟನೆ ಇದೀಗ ಬುರ್ಖಾ ಧರಿಸುವುದನ್ನೇ ನಿಷೇಧಿಸಿದೆ. ಇರಾಕ್‍ನ  ಮೊಸುಲ್ ಪಟ್ಟಣದ ಐಸಿಸ್ ಭದ್ರತಾ ಕೇ೦ದ್ರಗಳಿಗೆ ಆಗಮಿಸುವ ಮಹಿಳೆಯರು ಬುಖಾ೯ ಧರಿಸಕೂಡದು ಎ೦ದು ಉಗ್ರರು ಆದೇಶಿಸಿದ್ದಾರೆ.

ಇತ್ತೀಚೆಗೆ ಬುಖಾ೯ಧಾರಿಗಳು ಆತ್ಮಹತ್ಯಾ ದಾಳಿ ನಡೆಸಿ ಐಸಿಸ್ ಉಗ್ರರನ್ನು ಕೊಲ್ಲುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಈ ಕ್ರಮಕ್ಕೆ ಮು೦ದಾಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಪ್ರಾಣಕ್ಕೆ  ಧಕ್ಕೆಯಾಗಬಹುದೆ೦ಬ ಕಾರಣದಿ೦ದ, ಮೊಸುಲ್ ಪಟ್ಟಣದ ಐಸಿಸ್ ನೆಲೆಯಲ್ಲಿ ಬುಖಾ೯ ಧರಿಸದ೦ತೆ ಜಿಹಾದಿ ಪಡೆ ಎಚ್ಚರಿಕೆ ನೀಡಿದೆ.

ಕೆಲ ದಿನಗಳ ಹಿ೦ದೆ ಬುಖಾ೯ಧಾರಿಗಳು ಸಲಾಹ್ ಅಲ್‍ದಿನ್‍ನ ಉತ್ತರ ಭಾಗದಲ್ಲಿರುವ ಶಕ೯ತ್ ಚೆಕ್‍ಪೋಸ್ಟ್ ಬಳಿ ಐಸಿಸ್ ನೆಲೆ ಮೇಲೆ ಆತ್ಮಾಹುತಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ  ಇಬ್ಬರು ಉಗ್ರರು ಸಾವಿಗೀಡಾಗಿದ್ದರು. ದಾಳಿ ಬಳಿಕ ಆತಂಕಗೊಂಡಿದ್ದ ಐಸಿಸ್ ಸಂಘಟನೆ ಇದೀಗ ಬುರ್ಖಾ ನಿಷೇಧ ಹೇರಿದೆ.

ಆದರೆ ಐಸಿಸ್ ಕಚೇರಿಗಳಿಗೆ ಹೊರತಾದ ಬೇರೆಲ್ಲ ಪ್ರದೇಶಗಳಲ್ಲಿ ಬುಖಾ೯ ಕಡ್ಡಾಯ ಮು೦ದುವರಿಯಲಿದೆ ಎಂದು ಇಸಿಸ್ ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com