"(ಅಮೇರಿಕ ಅಧ್ಯಕ್ಷ ಬರಾಕ್) ಒಬಾಮಾ, ಡಿ ಪಿ ಆರ್ ಕೆ (ಉತ್ತರ ಕೊರಿಯಾ) ಅಧಿಕೃತ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರವಾಗಿ, ಕುಶಲತೆಯಲ್ಲಿ ಉತ್ತಮ ಸ್ಥಾನದಲ್ಲಿದೆ ಎಂಬುದನ್ನು ಅಲ್ಲಗೆಳೆಯಲು ಕಷ್ಟ ಪಡುತ್ತಿದ್ದಾರೆ ಆದರೆ ಇದು ಅಂಗೈ ಅಡ್ಡ ಹಿಡಿದು ಸೂರ್ಯ ಇಲ್ಲ ಎಂದು ಹೇಳುವಷ್ಟು ಮೂರ್ಖತನ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿರುವುದಾಗಿ ಕೆ ಎನ್ ಸಿ ಎ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.