ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆಗೆ ಹಿನ್ನಡೆ?: ಚೀನಾ ಮಾಧ್ಯಮ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗಲಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ...
ಚೀನಾ, ಪಾಕಿಸ್ತಾನ
ಚೀನಾ, ಪಾಕಿಸ್ತಾನ

ಬೀಜಿಂಗ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗಲಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಚೀನಾಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದು ಚೀನಾ ಮಾಧ್ಯಮವೊಂದು ವರದಿ ಮಾಡಿದೆ.

ಆರ್ಥಿಕ ಕಾರಿಡಾರ್ ಯೋಜನೆಗೆ ಸ್ಥಳೀಯರ ವಿರೋಧ, ಭದ್ರತೆ ಹಾಗೂ ಮುಂದೆ ಸಂಭವಿಸಬಹುದಾದ ರಾಜಕೀಯ ಬದಲಾವಣೆ ಮತ್ತಿತರ ಅಂಶಗಳನ್ನು ನೋಡಿದರೆ ಯೋಜನೆಯ ವೆಚ್ಚ ಅಂದಾಜು ಮೊತ್ತ 3 ಲಕ್ಷ ಕೋಟಿ ರುಪಾಯಿಗಿಂತ ಹೆಚ್ಚು ದುಬಾರಿಯಾಗಲಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ 7,036 ಚೀನಿ ಕಾರ್ಮಿಕರಿಗೆ ಪಾಕಿಸ್ತಾನ 14,503 ಸಿಬ್ಬಂದಿಯನ್ನು ನಿಯೋಜಿಸಿದೆ. ಕಾರ್ಮಿಕರ ವೇತನಕ್ಕಿಂತ ಅವರ ಭದ್ರತೆಗಾಗಿ ಮಾಡುವ ವೆಚ್ಚವೇ ಹೆಚ್ಚಾಗಿದೆ. ಹೀಗಾಗಿ ಈ ಯೋಜನೆಗೆ ಚೀನಾ ಹೆಚ್ಚು ಆಸಕ್ತಿ ಹೊಂದಿಲ್ಲ. ಹೀಗಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ವಿಳಂಬವಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಚೀನಾದಲ್ಲಿ ನಡೆದ ಜಿ20 ಶೃಂಗದಲ್ಲಿ ಪ್ರಧಾನಿ ಮೋದಿ ಆರ್ಥಿಕ ಕಾರಿಡಾರ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಚೀನಾ ಮಾಧ್ಯಮ ಈ ರೀತಿ ವರದಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com