ಪಾಕ್ ನೂತನ ಪರಮಾಣು ಸ್ಥಾವರ ನಿರ್ಮಿಸುತ್ತಿರುವ ಸಾಧ್ಯತೆ ಇದೆ: ತಜ್ಞರು

ಪರಮಾಣು ದಾಸ್ತಾನಿನಲ್ಲಿ ವಿಶ್ವದಲ್ಲೇ ಅತಿ ವೇಗವಾಗಿ ಮುನ್ನುಗ್ಗುತ್ತಿರುವ ಪಾಕಿಸ್ತಾನ ಇದೀಗ ಹೊಸದಾಗಿ ಯುರೇನಿಯಂ ಸಂಸ್ಕರಣಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಇಸ್ಲಾಮಾಬಾದ್: ಪರಮಾಣು ದಾಸ್ತಾನಿನಲ್ಲಿ ವಿಶ್ವದಲ್ಲೇ ಅತಿ ವೇಗವಾಗಿ ಮುನ್ನುಗ್ಗುತ್ತಿರುವ ಪಾಕಿಸ್ತಾನ ಇದೀಗ ಹೊಸದಾಗಿ ಯುರೇನಿಯಂ ಸಂಸ್ಕರಣಾ ದಾಸ್ತಾನು ಸಂಕೀರ್ಣವನ್ನು ನಿರ್ಮಿಸುತ್ತಿರುವ ಸಾಧ್ಯತೆ ಇದೆ ಎಂದು ವಾಣಿಜ್ಯ ಉಪಗ್ರಹ ಚಿತ್ರ ವಿಶ್ಲೇಷಿಸುತ್ತಿದೆ ಎಂದು ಪಶ್ಚಿಮದ ರಕ್ಷಣಾ ತಜ್ಞರು ಹೇಳಿದ್ದಾರೆ.
ಪೂರ್ವ ಇಸ್ಲಾಮಾಬಾದ್ ನಿಂದ 30 ಕಿ.ಮೀ. ದೂರದಲ್ಲಿ ಈ ಹೊಸ ಯುರೇನಿಯಂ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದ್ದು, ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರ ಬಲವರ್ಧನೆಗೆ ಬಯಸುತ್ತಿದೆ ಎಂಬುದುಕ್ಕೆ ಇದು ಸಾಕ್ಷಿಯಾಗಿದೆ.
2015ರ ಸೆಪ್ಟೆಂಬರ್ ನಿಂದ 2016 ಏಪ್ರಿಲ್ 18ರೊಳಗೆ ಏರ್ ಬಸ್ ಡಿಫೆನ್ಸ್ ಆಂಡ್ ಸ್ಪೇಸ್ ತೆಗೆದ ಉಪಗ್ರಹದ ಚಿತ್ರವನ್ನು ಬಳಸಿಕೊಂಡು ಐಎಚ್ಎಸ್ ನ ಜ್ಯಾನೆ ಇಂಟಲಿಜೆನ್ಸ್ ಈ ವಿಶ್ಲೇಷಣೆ ಮಾಡಿದೆ.
ಸುಮಾರು 1.2 ಹೆಕ್ಟೇರ್ ಪ್ರದೇಶದಲ್ಲಿ ಈ ನೂತನ ಯುರೇನಿಯಂ ದಾಸ್ತಾನು ಸಂಕೀರ್ಣ ನಿರ್ಮಿಸಲಾಗುತ್ತಿದ್ದು, ಖಾನ್ ಸಂಶೋಧನಾ ಪ್ರಯೋಗಾಲಯದ ಅತಿ ಭದ್ರತೆಯ ವ್ಯಾಪ್ತಿಗೆ ಇದು ಒಳಪಟ್ಟಿದೆ. ಈ ಸಂಕೀರ್ಣದ ರಚನೆಯೂ ಯುರೋಪ್ ನಲ್ಲಿ ಬಹಳಷ್ಟು ಪರಮಾಣು ಘಟಕ ಹೊಂದಿರುವ ಪರಮಾಣು ಇಂಧನ ಕಂಪನಿ ಯುಆರ್ಇಎನ್ಒ ರಚನೆಯನ್ನು ಹೋಲುತ್ತದೆ ಎಂದು ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com