ಅಮೆರಿಕಾದಲ್ಲಿ ವಿಕೆಂಡ್ ಬಾಂಬರ್ ನನ್ನು ಹಿಡಿಯುವಲ್ಲಿ ಪೊಲೀಸರಿಗೆ ನೆರವಾದ ಭಾರತೀಯ ಸಿಖ್

ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ನಡೆದ ಬಾಂಬಿಂಗ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ 28ರ ಹರೆಯದ ಅಫ್ಘಾನ್-ಅಮೆರಿಕನ್ ಆರೋಪಿ...
ಹರೀಂದರ್ ಬೇನ್ಸ್
ಹರೀಂದರ್ ಬೇನ್ಸ್

ನ್ಯೂಯಾರ್ಕ್: ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ನಡೆದ ಬಾಂಬಿಂಗ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ 28ರ ಹರೆಯದ ಅಫ್ಘಾನ್-ಅಮೆರಿಕನ್ ಆರೋಪಿ ಅಹ್ಮದ್ ಖಾನ್ ರಹಾಮಿಯನ್ನು ಹಿಡಿಯುವಲ್ಲಿ ಪೊಲೀಸರಿಗೆ ನೆರವಾದ ಭಾರತ ಮೂಲದ ಸಿಖ್ ಬಾರ್ ಮಾಲೀಕ ಹರೀಂದರ್ ಬೆನ್ಸ್ ಈಗ ಅಮೆರಿಕದಲ್ಲಿ ಪ್ರಸಿದ್ಧಿಯಾಗಿದ್ದಾನೆ.

ಬೇನ್ಸ್ ತನ್ನ ಬಾರಿನ ಮುಂದೆ ಸೋಮವಾರ ಬೆಳಗ್ಗೆ ಯಾರೋ ಮಲಗಿರುವುದನ್ನು ನೋಡಿದ್ದಾರೆ. ಮೊದಲಿಗೆ ಯಾರೋ ಕುಡಿದು ಮಲಗಿರುಬೇಕು ಎಂದುಕೊಂಡ ಬೇನ್ಸ್ ಸುಮ್ಮನಾಗಿದ್ದಾರೆ. ಆದರೆ ರಹಾಮಿ ತನ್ನ ಲ್ಯಾಪ್ ಟಾಪ್ ನಲ್ಲಿ ಟಿವಿ ನ್ಯೂಸ್ ವೀಕ್ಷಿಸುತ್ತಿರುವುದು ನೋಡಿ ಬಾಂಬಿಂಗ್ ಪ್ರಕರಣ ಸಂಬಂಧ ಪೊಲೀಸರಿಗೆ ಬೇಕಾಗಿರುವ ಆರೋಪಿ ಇತನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯಪೌರೃತ್ತರಾದ ಪೊಲೀಸರು ಆರೋಪಿ ರಹಾಮಿಯನ್ನು ಹಿಡಿಯಲು ಬೇನ್ಸ್ ಬಾರಿನ ಬಳಿಗೆ ಬಂದಿದ್ದಾರೆ. ಇದರಿಂದ ವಿಚಲಿನತನಾದ ರಹಾಮಿ ತನ್ನಲ್ಲಿದ್ದ ಗನ್ ಅನ್ನು ಹೊರತೆಗೆದು ಪೊಲೀಸರ ವಿರುದ್ಧ ಗುಂಡು ಹಾರಿಸುತ್ತ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಆರೋಪಿಯ ಬೆನ್ನು ಬಿಡದ ಪೊಲೀಸರು ರಹಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಹಿಡಿದುಕೊಡುವಲ್ಲಿ ಪೊಲೀಸರಿಗೆ ನೇರವಾದ ಹರೀಂದರ್ ಬೇನ್ಸ್ ಇದೀಗ ಅಮೆರಿಕದಲ್ಲಿ ಹೀರೋ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೇನ್ಸ್ ನಾನು ಯಾವುದೇ ಒಬ್ಬ ಸಾಮಾನ್ಯ ಪ್ರಜೆ ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ. ನಿಜಕ್ಕೂ ಹೀರೋಗಳು ಪೊಲೀಸರು. ಅವರ ಧೈರ್ಯ ಸಾಹಸದಿಂದಲೇ ಬಾಂಬರ್ ನನ್ನು ಹಿಡಿಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com