"ಮುಸ್ಲಿಮ್ಸ್ ಗೆಟ್ ಔಟ್" ಎಂದ ಹೊಟೆಲ್ ಮಾಲೀಕನಿಗೆ ಅಮೆರಿಕ ಮಸೀದಿಯಿಂದ ಆಹ್ವಾನ!

ಅಮೆರಿಕದಲ್ಲಿ ಕಳೆದ ವಾರ ನಡೆದ ಭೀಕರ ದಾಳಿ ಖಂಡಿಸಿ ತನ್ನ ಹೊಟೆಲ್ ಮೆನುಬೋರ್ಡ್ ನಲ್ಲಿ ಮುಸ್ಲಿಮ್ಸ್ ಗೆಟ್ ಔಟ್ ಫಲಕ ಹಾಕಿದ್ದ ರೆಸ್ಟೋರೆಂಟ್ ಮಾಲೀಕನಿಗೆ ಅಮೆರಿಕ ಮಸೀದಿಗೆ ಭೇಟಿ ನೀಡುವಂತೆ ಆಹ್ವಾನ ಬಂದಿದೆ.
ಟ್ರೀಟ್ಸ್ ಫ್ಯಾಮಿಲಿ ರೆಸ್ಟೋರೆಂಟ್ ವಿವಾದಿತ ಮೆನುಬೋರ್ಡ್ (ಎಪಿ ಚಿತ್ರ)
ಟ್ರೀಟ್ಸ್ ಫ್ಯಾಮಿಲಿ ರೆಸ್ಟೋರೆಂಟ್ ವಿವಾದಿತ ಮೆನುಬೋರ್ಡ್ (ಎಪಿ ಚಿತ್ರ)

ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದ ವಾರ ನಡೆದ ಭೀಕರ ದಾಳಿ ಖಂಡಿಸಿ ತನ್ನ ಹೊಟೆಲ್ ಮೆನುಬೋರ್ಡ್ ನಲ್ಲಿ ಮುಸ್ಲಿಮ್ಸ್ ಗೆಟ್ ಔಟ್ ಫಲಕ ಹಾಕಿದ್ದ ರೆಸ್ಟೋರೆಂಟ್ ಮಾಲೀಕನಿಗೆ ಅಮೆರಿಕ  ಮಸೀದಿಗೆ ಭೇಟಿ ನೀಡುವಂತೆ ಆಹ್ವಾನ ಬಂದಿದೆ.

ಇಸ್ಲಾಂ ಹಾಗೂ ಮುಸ್ಲಿಂ ಸಮುದಾಯದ ಕುರಿತಂತೆ ಅಧ್ಯಯನ ಮಾಡುವಂತೆ ಅಮೆರಿಕ ಮಸೀದಿ ಟ್ರೀಟ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಮಾಲಿಕ ಡ್ಯಾನ್ ರ್ಯೂಡಿಂಗರ್ ಗೆ ಆಹ್ವಾನ ನೀಡಿದೆ. ಕಳೆದ  ವಾರ ಮಿನ್ನೆಸೋಟಾದ ಶಾಪಿಂಗ್ ಮಾಲ್ ನಡೆದಿದ್ದ ಭೀಕರ ಹಲ್ಲೆ ಪ್ರಕರಣ ಸಂಬಂಧ ಆಕ್ರೋಶ ಭರಿತನಾಗಿದ್ದ ರೆಸ್ಟೋರೆಂಟ್ ಮಾಲೀಕ ಡ್ಯಾನ್ ರ್ಯೂಡಿಂಗರ್  ತನ್ನ ಹೊಟೆಲ್ ಮೆನು  ಬೋರ್ಡ್ ನಲ್ಲಿ ಮುಸ್ಲಿಮ್ಸ್ ಗೆಟ್ ಔಟ್ ಎಂದು ಬರೆದುಕೊಂಡು ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ.

ಡ್ಯಾನ್ ರ್ಯೂಡಿಂಗರ್ ರನ ಬರವಣೆಗೆ ಕುರಿತಂತೆ ವಿಶ್ವದ ವಿವಿಧೆಡೆ ಇರುವ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸ್ಥಳೀಯ ಸರ್ಕಾರ ಮಾತ್ರ ಡ್ಯಾನ್ ರ್ಯೂಡಿಂಗರ್  ನ ಪರವಾಗಿ ನಿಂತಿತು. ಆತನಿಂದ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ. ಆತನಿಚ್ಛಿಸುವುದನ್ನು ಹೇಳುವ ವಾಕ್ ಸ್ವಾತಂತ್ರ್ಯ ಆತನಿಗೆದೆ ಎಂದು ಹೇಳಿತ್ತು.

ತನ್ನ ವಿವಾದಾತ್ಮಕ ಬರವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಡ್ಯಾನ್ ರ್ಯೂಡಿಂಗರ್, ತಾನು ಯಾವುದೇ ನಿರ್ಧಿಷ್ಟ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಈ ಮಾತನ್ನು ಹೇಳಿಲ್ಲ. ಆದರೆ  ಮಿನ್ನೆಸೋಟಾ ದಾಳಿ ನನ್ನನ್ನು ನಿಜಕ್ಕೂ ಕೆರಳಿಸಿತ್ತು ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಅಮೆರಿಕದ ಮಸೀದಿಯೊಂದು ಡ್ಯಾನ್ ರ್ಯೂಡಿಂಗರ್ ಮಸೀದಿಗೆ ಭೇಟಿ ನೀಡಿ ಇಸ್ಲಾಂ ಕುರಿತು ಅಧ್ಯಯನ ನಡೆಸುವಂತೆ ಆಹ್ವಾನಿಸಿದೆ. ಮಿನ್ನೋಸೋಟಾ ಸೆಂಟ್ ಕ್ಲೌವ್ಡ್  ಶಾಪಿಂಗ್ ಮಾಲ್ ಗೆ ನುಗ್ಗಿದ್ದ ಅನಾಮಿಕ ದಾಳಿಕೋರನೋರ್ವ ಮನಸೋ ಇಚ್ಛೆ ಸಿಕ್ಕಸಿಕ್ಕವರಿಗೆ ಇರಿದಿದ್ದ. ಘಟನೆಯಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com