ಒಬಾಮ ವೆಟೋ ಅಧಿಕಾರಕ್ಕೆ ಯುಎಸ್ ಸೆನೆಟ್ ಸೆಡ್ಡು: 9/11 ಸಂತ್ರಸ್ತರಿಗೆ ಸೌದಿ ವಿರುದ್ಧ ದಾವೆ ಹೂಡಲು ಅವಕಾಶ

9/11 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಸೌದಿ ವಿರುದ್ಧ ಪ್ರಕರಣ ದಾವೆ ಹೂಡುವ ಮಸೂದೆಯನ್ನು ಅಸಿಂಧುಗೊಳಿಸಿದ್ದ ಬರಾಕ್ ಒಬಾಮ ಅವರ ವೆಟೊ ಅಧಿಕಾರದ ವಿರುದ್ಧ ಅಮೆರಿಕ ಸೆನೆಟ್ ಮತಚಲಾವಣೆ ಮಾಡಿದೆ.
ಒಬಾಮ
ಒಬಾಮ

ವಾಷಿಂಗ್ ಟನ್: 9/11 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಸೌದಿ ವಿರುದ್ಧ ಪ್ರಕರಣ ದಾವೆ ಹೂಡುವ ಮಸೂದೆಯನ್ನು ಅಸಿಂಧುಗೊಳಿಸಿದ್ದ ಬರಾಕ್ ಒಬಾಮ ಅವರ ವೆಟೊ ಅಧಿಕಾರದ ವಿರುದ್ಧ ಅಮೆರಿಕ ಸೆನೆಟ್ ಮತಚಲಾವಣೆ ಮಾಡಿದೆ.

ಅಮೆರಿಕ ಅಧ್ಯಕ್ಷರ ವೆಟೋ ಅಧಿಕಾರದ ವಿರುದ್ಧ ಸೆನೆಟ್ ನಲ್ಲಿ ಮತ ಚಲಾವಣೆ ಮಾಡಿರುವುದರಿಂದ, ನೆನೆಟ್ ನಲ್ಲಿ ಮಂಡನೆಯಾಗಿರುವ ಮಸೂದೆ ಸಿಂಧುವಾಗಿದ್ದು, 9/11 ರ ದಾಳಿ ಸಂತ್ರಸ್ತ ಕುಟುಂಬಗಳು ಸೌದಿ ಅರೇಬಿಯಾ ಮೇಲೆ ದಾವೆ ಹೂಡಲು ಅವಕಾಶ ಸಿಕ್ಕಂತಾಗಿದೆ. ಅಲ್ಲದೆ 8 ವರ್ಷಗಳ ಅಮೆರಿಕ ಅಧ್ಯಕ್ಷೀಯ ಅವಧಿಯಲ್ಲಿ ಮೊದಲ ಬಾರಿಗೆ ಬರಾಕ್ ಒಬಾಮ ಅವರ ಅಧಿಕಾರಕ್ಕೆ ಸೆನೆಟ್ ಸೆಡ್ಡು ಹೊಡೆದಿದೆ.

9/11 ರ ದಾಳಿ ಸಂತ್ರಸ್ತರು ಸೌದಿ ಅರೇಬಿಯಾ ವಿರುದ್ಧ ದಾವೆ ಹೂಡಲು ಅವಕಾಶ ನೀಡುವ ಮಸೂದೆಯೊಂದು ಅಮೆರಿಕ ಸಂಸತ್ ನಲ್ಲಿ ಮಂಡನೆಯಾಗಬೇಕಿತ್ತು. ಆದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ತಮ್ಮ ವಿಶೇಷ ಅಧಿಕಾರ ವೆಟೋ ಬಳಸಿ, ಸೌದಿ ವಿರುದ್ಧ ದಾವೆ ಹೂಡಲು ಅವಕಾಶ ನೀಡುವ ಮಸೂದೆಯನ್ನು ಅಸಿಂಧುಗೊಳಿಸಿದ್ದರು. ಆದರೆ ಅಮೆರಿಕ ಅಧ್ಯಕ್ಷರ ವೆಟೋಗೂ ಜಗ್ಗದ ಅಮೆರಿಕ ಸೆನೆಟ್ ನ 98 ಸಂಸದರ ಪೈಕಿ 97 ಜನರು ಮಸೂದೆ ಪರವಾಗಿ ಮತ ಚಲಾಯಿಸಿದ್ದಾರೆ. ಒಬಾಮ ಆಪ್ತರಾಗಿರುವ ಸಂಸದನೊಬ್ಬ ಮಾತ್ರ ಮಸೂದೆ ವಿರುದ್ಧ ಮತ ಚಲಾವಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com