ಪಾಕಿಸ್ತಾನ ಹಾಗೂ ಭಯೋತ್ಪಾದನೆ ಎರಡೂ ಒಂದೇ ಎಂದು ತಿಳಿದಿದಂತಿದೆ: ಅದ್ನಾನ್ ಸಮಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿ ಅಡಗಿದ್ದ ಉಗ್ರರನ್ನು ಹಾಗೂ ಅವರ ತರಬೇತಿ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆ ಪರಾಕ್ರಮವನ್ನು ಹೊಗಳಿದ್ದ ಪಾಕ್ ಮೂಲದ ಗಾಯಕ ಅದ್ನಾನ್ ಸಮಿ ಇದೀಗ ಪಾಕಿಸ್ತಾನ ಪ್ರಜೆಗಳಿಂದ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ.
ಗಾಯಕ ಅದ್ಮಾನ್ ಸಮಿ ಮತ್ತು ಟ್ವೀಟ್
ಗಾಯಕ ಅದ್ಮಾನ್ ಸಮಿ ಮತ್ತು ಟ್ವೀಟ್

ದುಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿ ಅಡಗಿದ್ದ ಉಗ್ರರನ್ನು ಹಾಗೂ ಅವರ ತರಬೇತಿ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆ ಪರಾಕ್ರಮವನ್ನು ಹೊಗಳಿದ್ದ ಪಾಕ್  ಮೂಲದ ಗಾಯಕ ಅದ್ನಾನ್ ಸಮಿ ಇದೀಗ ಪಾಕಿಸ್ತಾನ ಪ್ರಜೆಗಳಿಂದ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ.

ಭಾರತೀಯ ಸೇನೆ ಶೌರ್ಯವನ್ನು ಮೆಚ್ಚಿ ಅದ್ನಾನ್ ಸಮಿ ಮಾಡಿದ್ದ ಟ್ವೀಟ್ ವಿರೋಧಿಸಿ ಪಾಕಿಸ್ತಾನದ ವಿವಿಧ ಮೂಲೆಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದ ಶತ್ರುರಾಷ್ಟ್ರ ಭಾರತವನ್ನು  ಹೊಗಳುತ್ತಿರುವ ಅದ್ನಾನ್ ಸಮಿ ಕೂಡ ಶತ್ರುವೇ ಎಂಬ ಧಾಟಿಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದ್ನಾನ್ ಸಮಿ ಟ್ವೀಟ್ ಪಾಕಿಸ್ತಾನ ಮಾಧ್ಯಮಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದ್ದು,  ಪಾಕಿಸ್ತಾನದಲ್ಲಿ ಜನಿಸಿದ ಅದ್ನಾನ್ ಸಮಿ ಹೀಗೆ ಶತ್ರುರಾಷ್ಟ್ರವನ್ನು ಹೊಗಳುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಆದರೆ ಪಾಕಿಸ್ತಾನದಲ್ಲಿ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ವ್ಯಾಪಕ ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗಾಯಕ ಅದ್ನಾನ್ ಸಮಿ ಅದೇ ಧಾಟಿಯಲ್ಲಿ ವಿರೋಧಿಗಳಿಗೆ ತಿರುಗೇಟು  ನೀಡಿದ್ದು, ತಮ್ಮನ್ನು ವಿರೋಧಿಸುತ್ತಿರುವವರು ಪಾಕಿಸ್ತಾನ ಹಾಗೂ ಭಯೋತ್ಪಾದನೆ ಎರಡನ್ನೂ ಒಂದೇ ಎಂದು ತಿಳಿದಿದ್ದಾರೆ. ಹೀಗಾಗಿ ಭಯೋತ್ಪಾದನೆ ವಿರೋಧಿಸಿ ತಾವು ಮಾಡಿದ್ದ ಟ್ವೀಟ್  ಅನ್ನು ದೇಶ ವಿರೋಧಿ ಟ್ವೀಟ್ ಎಂದು ಪರಿಗಣಿಸಿದ್ದಾರೆ ಎಂದು ಸಮಿ ಮತ್ತೆ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com