ಭಾರತೀಯ ಐಟಿ ಉದ್ಯೋಗಿಗಳಿಗೆ ಮತ್ತಷ್ಟು ಸಂಕಷ್ಟ: ಯುಎಸ್ ನಂತರ ಸಿಂಗಾಪೂರ್ ವೀಸಾ ನೀತಿ ಕಠಿಣ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾ ನೀತಿ-ನಿಯಮಗಳನ್ನು ಕಠಿಣಗೊಳಿಸಿದ ನಂತರ ಈಗ ಭಾರತೀಯ ಐಟಿ ಉದ್ಯೋಗಿಗಳು ಮತ್ತಷ್ಟು ಸಂಕಷ್ಟ ಎದುರಾಗುವ ಭೀತಿಯಲ್ಲಿದ್ದಾರೆ.
ಭಾರತೀಯ ಐಟಿ ಉದ್ಯೋಗಿಗಳಿಗೆ ಮತ್ತಷ್ಟು ಸಂಕಷ್ಟ: ಯುಎಸ್ ನಂತರ ಸಿಂಗಾಪೂರ್ ವೀಸಾ ನೀತಿ ಕಠಿಣ?
ಭಾರತೀಯ ಐಟಿ ಉದ್ಯೋಗಿಗಳಿಗೆ ಮತ್ತಷ್ಟು ಸಂಕಷ್ಟ: ಯುಎಸ್ ನಂತರ ಸಿಂಗಾಪೂರ್ ವೀಸಾ ನೀತಿ ಕಠಿಣ?
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾ ನೀತಿ-ನಿಯಮಗಳನ್ನು ಕಠಿಣಗೊಳಿಸಿದ ನಂತರ ಈಗ ಭಾರತೀಯ ಐಟಿ ಉದ್ಯೋಗಿಗಳು ಮತ್ತಷ್ಟು ಸಂಕಷ್ಟ ಎದುರಾಗುವ ಭೀತಿಯಲ್ಲಿದ್ದಾರೆ. ಕಾರಣ ಅಮೆರಿಕಾದ ನಂತರ ಈಗ ಸಿಂಗಾಪೂರ್ ಸಹ ವೀಸಾ ನೀತಿಯನ್ನು ಕಠಿಣಗೊಳಿಸುತ್ತಿದೆ. 
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಸಿಂಗಾಪೂರ್ ಭಾರತೀಯ ಐಟಿ ಉದ್ಯೋಗಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ವೀಸಾ ಮಿತಿ ಹೇರುತ್ತಿದ್ದು. 2016 ರ ಪ್ರಾರಂಭದಿಂದಲೂ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಭಾರತೀಯ ಸಂಸ್ಥೆಗಳಿಗೂಈ ಬಗ್ಗೆ ಸಂದೇಶ ರವಾನೆಯಾಗಿದ್ದು, ಸ್ಥಳೀಯರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕೆಂಬ ಸೂಚನೆಯನ್ನು ಪರೋಕ್ಷವಾಗಿ ರವಾನೆ ಮಾಡಲಾಗುತ್ತಿದೆ ಎಂದು ನಾಸ್ಕಾಂ ನ ಅಧ್ಯಕ್ಷ ಆರ್ ಚಂದ್ರಶೇಖರ್ ತಿಳಿಸಿದ್ದಾರೆ. 
ಸಿಂಗಾಪೂರ್ ನಲ್ಲಿ ಭಾರತೀಯ ಐಟಿ ಉದ್ಯೋಗಿಗಳಿಗೆ ವೀಸಾ ಅನುಮೋದನೆಗಳು ಕುಸಿಯುತ್ತಿರುವುದೂ ಸಹ ಅಮೆರಿಕಾದ ಮಾದರಿಯಲ್ಲೇ ಸಿಂಗಾಪೂರ್ ಸಹ ವೀಸಾ ನೀತಿಯನ್ನು ಕಠಿಣಗೊಳಿಸುತ್ತಿದೆ ಎಂಬುದಕ್ಕೆ ಪೂರಕವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com