ಸೇನಾ ನೆಲೆಗಳ ಮೇಲಿನ ದಾಳಿ ಅಮೆರಿಕದ ಆಕ್ರಮಣಕಾರಿ ಮನೋಭಾವವನ್ನು ತೋರಿಸುತ್ತದೆ: ಸಿರಿಯಾ

ಕೆಮಿಕಲ್ ದಾಳಿಯನ್ನು ಖಂಡಿಸಿ ಅಮೆರಿಕ ಸೇನೆ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ಸಿರಿಯಾ ಸರ್ಕಾರ ಖಂಡಿಸಿದ್ದು, ದಾಳಿ ಅಮೆರಿಕದ ಆಕ್ರಮಣಕಾರಿ ಮನೋಭಾವವನ್ನು ತೋರಿಸುತ್ತದೆ ಎಂದು ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡಮಾಸ್ಕಸ್: ಕೆಮಿಕಲ್ ದಾಳಿಯನ್ನು ಖಂಡಿಸಿ ಅಮೆರಿಕ ಸೇನೆ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ಸಿರಿಯಾ ಸರ್ಕಾರ ಖಂಡಿಸಿದ್ದು, ದಾಳಿ ಅಮೆರಿಕದ ಆಕ್ರಮಣಕಾರಿ ಮನೋಭಾವವನ್ನು ತೋರಿಸುತ್ತದೆ ಎಂದು ಕಿಡಿಕಾರಿದೆ.

ಸಿರಿಯಾ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಅಮೆರಿಕ ದಾಳಿಯನ್ನು ಕಟು ಶಬ್ದಗಳಿಂದ ಖಂಡಿಸಿದ್ದು, ಅಮೆರಿಕ ಸಿರಿಯಾದ ಸೇನಾ ನೆಲೆ ಮೇಲೆ ನಡೆಸಿದ ಸತತ ಕ್ಷಿಪಣಿ ದಾಳಿಯಿಂದಾಗಿ ಸಾಕಷ್ಟು ಸಾವು-ನೋವು ಸಂಭವಿಸಿದೆ. ಈ  ದಾಳಿಯನ್ನು ವಿಶ್ವಸಮುದಾಯ ಖಂಡಿಸಬೇಕಿದ್ದು, ಸಿರಿಯಾ ಪ್ರಜೆಗಳು ಅಮೆರಿಕವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದೆ.

ಇನ್ನು ಅಮೆರಿಕದ ಕ್ಷಿಪಣಿ ದಾಳಿ ಮುಸ್ಲಿಂ ರಾಷ್ಟ್ರಗಳ ಪ್ರಮುಖ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಬಹುತೇಕ ಎಲ್ಲ ಮಾಧ್ಯಮಗಳೂ ಅಮೆರಿಕದ ಕ್ಷಿಪಣಿ ದಾಳಿಯನ್ನು ಖಂಡಿಸಿವೆ. ಮಾಧ್ಯಮಗಳಲ್ಲಿ ಅಮೆರಿಕ ವಿರುದ್ಧ ಸರಣಿ  ಜಾಗೃತಿ ಅಭಿಯಾನ ನಡೆಯುತ್ತಿದ್ದು, ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ.

ಕ್ಷಿಪಣಿ ದಾಳಿ ಕುರಿತು ಮೊದಲೇ ರಷ್ಯಾಕ್ಕೆ ಮಾಹಿತಿ ನೀಡಿದ್ದ ಅಮೆರಿಕ!
ಇನ್ನು ಸಿರಿಯಾ ಸೇನಾ ನೆಲೆ ಮೇಲೆ ಅಮರಿಕ ಸೇನೆ ಕ್ಷಿಪಣಿ ದಾಳಿ ನಡೆಸುವ ಕುರಿತು ರಷ್ಯಾ ಸರ್ಕಾರಕ್ಕೆ ಮೊದಲೇ ಮಾಹಿತಿ ನೀಡಿತ್ತು ಎಂಬ ವಿಚಾರ ಬೆಳಕಿಗೆ ಬಂದಿದ್ದು, ಸಿರಿಯಾದಲ್ಲಿ ಇಸಿಸ್ ಉಗ್ರ ಸಂಘಟನೆ ವಿರುದ್ಧ  ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಸೈನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಿರಿಯಾ ಮೇಲೆ ದಾಳಿ ನಡೆಸುವುದಾಗಿ ಪೆಂಟಗನ್ ರಷ್ಯಾ ಸರ್ಕಾರಕ್ಕೆ ಮಾಹಿತಿ ನೀಡಿತ್ತು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com