ಸ್ವೀಡನ್ ನಲ್ಲಿ ಉಗ್ರ ದಾಳಿ: 4ಕ್ಕೇರಿದ ಸಾವಿನ ಸಂಖ್ಯೆ, 15 ಮಂದಿಗೆ ಗಾಯ

ಸ್ವೀಡನ್ ದೇಶದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಜನರ ಮೇಲೆ ಉಗ್ರರು ಟ್ರಕ್ ಹರಿಸಿದ ಪರಿಣಾಮ ಸಾವನ್ನಪ್ಪಿದ್ದವರ ಸಂಖ್ಯೆ ಶನಿವಾರ 4ಕ್ಕೇರಿದೆ.
ಸ್ವೀಡನ್ ನಲ್ಲಿ ಉಗ್ರ ದಾಳಿ
ಸ್ವೀಡನ್ ನಲ್ಲಿ ಉಗ್ರ ದಾಳಿ

ಸ್ಟಾಕ್ ಹೋಮ್: ಸ್ವೀಡನ್ ದೇಶದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಜನರ ಮೇಲೆ ಉಗ್ರರು ಟ್ರಕ್ ಹರಿಸಿದ ಪರಿಣಾಮ ಸಾವನ್ನಪ್ಪಿದ್ದವರ ಸಂಖ್ಯೆ ಶನಿವಾರ 4ಕ್ಕೇರಿದೆ.

ರಾಜಧಾನಿ ಸ್ಟಾಕ್ ಹೋಮ್ ನ ಕೇಂದ್ರ ಭಾಗದಲ್ಲಿ ದಾಳಿ ನಡೆದಿದ್ದು, ರಸ್ತೆ ಮೇಲಿದ್ದ ಟ್ರಕ್ ನೋಡ ನೋಡುತ್ತಿದ್ದಂತೆಯೇ ಫುಟ್ ಪಾತ್ ಮೇಲಿದ್ದ ಜನರ ಮೇಲೆ ಹರಿದಿದೆ. ಕೇಂದ್ರ ಸ್ಟಾಕ್ ಹೋಮ್ ನ ಅತ್ಯಂತ ಜನನಿಬಿಡ  ಪ್ರದೇಶವಾದ ಕ್ವೀನ್ಸ್ ಸ್ಟ್ರೀಟ್ ನಲ್ಲಿ ಈ ದಾಳಿ ನಡೆಸಲಾಗಿದ್ದು, ಆರಂಭದಲ್ಲಿ ಇದನ್ನು ಅಪಘಾತ ಎಂದ ಎಣಿಸಲಾಗಿತ್ತು. ಆದರೆ ಬಳಿಕ ಟ್ರಕ್ ಚಾಲಕ ಉದ್ದೇಶಪೂರ್ವಕವಾಗಿಯೇ ಟ್ರಕ್ ಅನ್ನು ಜನರ ಮೇಲೆ ಹರಿಸಿದ್ದಾನೆ. ಇನ್ನು  ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ದಾಳಿಕೋರನ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರು ಕಾರ್ಯಾಚರಣೆ ಶಂಕಿತ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಇನ್ನು ಘಟನೆಯನ್ನು ಉಗ್ರ ದಾಳಿ ಎಂದು ಸ್ವೀಡನ್ ಪ್ರಧಾನಿ ಸ್ಟೆಫನ್ ಲಾಫ್ವೆನ್ ಖಚಿತ ಪಡಿಸಿದ್ದು, ಇಂತಹ ದುಷ್ಕೃತ್ಯಗಳಿಂದ ಸ್ವೀಡನ್ ಅನ್ನು ಹಣಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ  ಕಠಿಣ ಕ್ರಮ ಜರುಗಿಸುವಂತೆಯೂ ಭದ್ರತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲವಾದರೂ, 2010ರಲ್ಲಿ ಯೂರೋಪ್ ನಲ್ಲಿ ಟ್ರಕ್ ದಾಳಿ ನಡೆಸಿದ್ದ ಅಲ್ ಖೈದಾ ಉಗ್ರ ಸಂಘಟನೆಯೇ ಈ ದಾಳಿಯನ್ನೂ ನಡೆಸಿರಬಹುದು ಎಂದು  ಶಂಕಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com