
ಸ್ಟಾಕ್ ಹೋಮ್: ಶುಕ್ರವಾರ ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ನಲ್ಲಿ ನಡೆದ ಭೀಕರ ಉಗ್ರ ದಾಳಿ ಪ್ರಕರಣ ಸಂಬಂಧ ತುರ್ತು ಕಾರ್ಯಾಚರಣೆ ನಡೆಸಿರುವ ಪೊಲೀಸರು ಓರ್ವ ಶಂಕಿತ ಉಗ್ರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಸ್ಟಾಕ್ ಹೋಮ್ ನ ಕ್ವೀನ್ಸ್ ರಸ್ತೆಯಲ್ಲಿ ಶುಕ್ರವಾರ ಜನರ ಮೇಲೆ ಟ್ರಕ್ ಹರಿಸಿ ನಾಲ್ಕು ಜನರ ಸಾವಿಗೆ ಕಾರಣವಾಗಿದ್ದ ಟ್ರಕ್ ಚಾಲಕ ಮತ್ತು ಆತನ ಸ್ನೇಹಿತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಪ್ರಕರಣ ಸಂಬಂಧ ಸ್ವೀಡಿಷ್ ಭದ್ರತಾ ತಜ್ಞರು ತನಿಖೆ ನಡೆಸುತ್ತಿದ್ದು, ಘಟನೆ ಉಗ್ರ ದಾಳಿಯೇ ಆದರೂ ಈ ವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಅಂತೆಯೇ ದಾಳಿ ಸಂಬಂಧ ಬಂಧನಕ್ಕೀಡಾಗಿರುವ ಇಬ್ಬರು ಶಂಕಿತ ಉಗ್ರರ ಕುರಿತೂ ಕೂಡ ಸ್ವೀಡಿಷ್ ಪೊಲೀಸರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.
2010ರ ಬಳಿಕ ಸ್ವೀಡನ್ ನಲ್ಲಿ ನಡೆದ ಅತ್ಯಂತ ದೊಡ್ಡ ಉಗ್ರ ದಾಳಿ ಇದಾಗಿದ್ದು, 2010ರ ಡಿಸೆಂಬರ್ ನಲ್ಲಿ ಉಗ್ರನೋರ್ವ ತನ್ನನ್ನು ತಾನು ಸ್ಫೋಟಿಸಿಕೊಳ್ಳಲು ಯತ್ನಿಸಿದ್ದ. ಆದರೆ ಭದ್ರತಾ ಅಧಿಕಾರಿಗಳು ಆತನನ್ನು ಗುಂಡಿಕ್ಕಿ ಕೊಂದು ಹಾಕಿದ್ದರು.
Advertisement