ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ; 4 ಮಕ್ಕಳು ಸೇರಿ 9 ನಾಗರಿಕರ ಸಾವು!

ಕೆಮಿಕಲ್ ಬಾಂಬ್ ದಾಳಿ ಹಿನ್ನಲೆಯಲ್ಲಿ ಸಿರಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ಸುಮಾರು 9 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡಮಾಸ್ಕಸ್: ಕೆಮಿಕಲ್ ಬಾಂಬ್ ದಾಳಿ ಹಿನ್ನಲೆಯಲ್ಲಿ ಸಿರಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ಸುಮಾರು 9 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಿರಿಯಾದ ಶರ್ಯಾತ್ ವಾಯು ನೆಲೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆ ಗುರುವಾರ ರಾತ್ರಿ ತನ್ನ ಪ್ರಬಲ ಟಾಮ್ಹಾಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಪರಿಣಾಮ ಶರ್ಯಾತ್ ವಾಯುಸೇನೆ ಸಮೀಪದ ಸುತ್ತಮುತ್ತಲಿರುವ  ಜನವಸತಿ ಪ್ರದೇಶಗಳ ಮೇಲೂ ಕ್ಷಿಪಣಿ ಬಿದ್ದು ಸ್ಫೋಟಗೊಂಡಿದೆ. ಪರಿಣಾಮ 4 ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸಿರಿಯಾ ಮಾಧ್ಯಮಗಳು ವರದಿ ಮಾಡಿವೆ.

ಶರ್ಯಾತ್ ವಾಯು ನೆಲೆ ಸಮೀಪದಲ್ಲಿರುವ ಅಲ್ ಹಮ್ರಾತ್ ಗ್ರಾಮದಲ್ಲಿ ಕ್ಷಿಪಣಿಗಳು ಸ್ಫೋಟಗೊಂಡಿದ್ದು, ಇಲ್ಲಿ ಒಂದು ಮಗು ಸೇರಿದಂತೆ ಒಟ್ಟು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಶರ್ಯಾತ್ ವಾಯುನೆಲೆಯಿಂದ  ಕೇವಲ 4 ಕಿ.ಮೀ ದೂರದಲ್ಲಿರುವ ಅಲ್ ಮಾಂಜುಲ್ ಗ್ರಾಮದಲ್ಲಿಯಾದ ಕ್ಷಿಪಣಿ ದಾಳಿಯಿಂದಾಗಿ 7 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಅಮೆರಿಕ ಕ್ಷಿಪಣಿ ದಾಳಿಯಲ್ಲಿ ಒಟ್ಟು 9 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.

ಇನ್ನು ಗುರುವಾರ ರಾತ್ರಿ ಅಮೆರಿಕ ಸೇನೆ 59 ಟಾಮ್ಹಾಕ್ ಕ್ಷಿಪಣಿಗಳನ್ನು ಸಿರಿಯಾದ ಶರ್ಯಾತ್ ವಾಯು ನೆಲೆ ಮೇಲೆ ಉಡಾಯಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com