ಅಮೆರಿಕಾಗೆ ಭೇಟಿ ನೀಡುವ ಬ್ರಿಟೀಷ್ ಪ್ರವಾಸಿಗರು ಪಾಸ್ವರ್ಡ್ ಹೇಳಬೇಕು!

ಬ್ರಿಟನ್ ದೇಶದ ಪ್ರವಾಸಿಗರು ಅಮೆರಿಕಾ ಪ್ರವೇಶಿಸಬೇಕೆಂದರೆ ಅವರ ಖಾಸಗಿ ಮಾಹಿತಿಯನ್ನು ನೀಡುವುದಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್ ಗಳ ಪಾಸ್ವರ್ಡ್ ನ್ನು ನೀಡಬೇಕಿದೆ.
ಅಮೆರಿಕಾ
ಅಮೆರಿಕಾ
ವಾಷಿಂಗ್ ಟನ್: ಬ್ರಿಟನ್ ದೇಶದ ಪ್ರವಾಸಿಗರು ಅಮೆರಿಕಾ ಪ್ರವೇಶಿಸಬೇಕೆಂದರೆ ಅವರ ಖಾಸಗಿ ಮಾಹಿತಿಯನ್ನು ನೀಡುವುದಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್ ಗಳ ಪಾಸ್ವರ್ಡ್ ನ್ನು ನೀಡಬೇಕಿದೆ. 
ಡೊನಾಲ್ಡ್ ಟ್ರಂಪ್ ಆಡಳಿತ ಜಾರಿಗೆ ತರಲು ಉದ್ದೇಶಿಸಿರುವ ಹೊಸ ನೀತಿಯ ಭಾಗವಾಗಿ ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್ ಗಳ ಪಾಸ್ವರ್ಡ್ ನ್ನು ಅಧಿಕಾರಿಗಳಿಗೆ ನೀಡುವುದು ಕಡ್ಡಾಯವಾಗಲಿದ್ದು, ಅಮೆರಿಕಾದ ಮಿತ್ರ ರಾಷ್ಟ್ರಗಳಾದ ಜರ್ಮನಿ ಮತ್ತು ಫ್ರಾನ್ಸ್ ಗಳಿಗೂ ಇದೇ ನಿಯಮ ಅನ್ವಯವಾಗಲಿದೆ. ಪಾಸ್ವರ್ಡ್ ಗಳನ್ನು ನೀಡುವುದರೊಂದಿಗೆ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುವುದೂ ಸಹ ಕಡ್ಡಾಯವಾಗಲಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ. 
ಅಮೆರಿಕಾಗೆ ಭೇಟಿ ನೀಡುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಸಹ ಅಮೆರಿಕಾದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ತಪಾಸಣೆಗೆ ಒಳಪಟ್ಟಿರುತ್ತಾರೆ ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದು, ಅಮೆರಿಕಾದ ಭದ್ರತೆಗಾಗಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com