ಚರ್ಚ್ ಮೇಲೆ ಉಗ್ರ ದಾಳಿ ಹಿನ್ನಲೆ: ಈಜಿಪ್ಟ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ!

ಈಜಿಪ್ಟ್ ನ ನೈಲ್ ಡೆಲ್ಟಾದ ಚರ್ಚ್ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದ ಪರಿಣಾಮ ಸಾವಿಗೀಡಾದವರ ಸಂಖ್ಯೆ 44ಕ್ಕೆ ಏರಿಕೆಯಾಗಿದ್ದು, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅವರು ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಈಜಿಪ್ಟ್ ಉಗ್ರ ದಾಳಿ
ಈಜಿಪ್ಟ್ ಉಗ್ರ ದಾಳಿ

ಕೈರೋ: ಈಜಿಪ್ಟ್ ನ ನೈಲ್ ಡೆಲ್ಟಾದ ಚರ್ಚ್ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದ ಪರಿಣಾಮ ಸಾವಿಗೀಡಾದವರ ಸಂಖ್ಯೆ 44ಕ್ಕೆ ಏರಿಕೆಯಾಗಿದ್ದು, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅವರು ಆಂತರಿಕ ತುರ್ತು ಪರಿಸ್ಥಿತಿ  ಘೋಷಣೆ ಮಾಡಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಂದಿನ ಮೂರು ತಿಂಗಳ ಕಾಲ ಈಜಿಪ್ಟ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಗುತ್ತಿದೆ ಎಂದು ಅಧ್ಯಕ್ಷ ಸಿಸಿ ಭಾನುವಾರ ತಿಳಿಸಿದ್ದಾರೆ. ಅತ್ತ ಉಗ್ರ  ದಾಳಿ ಸಂಭವಿಸುತ್ತಿದ್ದಂತೆಯೇ ರಾಜಧಾನಿ ಕೈರೋದಲ್ಲಿ ತುರ್ತು ಭದ್ರತಾ ಕೌನ್ಸಿಲ್ ಸಭೆ ಕರೆದ ಅಧ್ಯಕ್ಷ ಸಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಇನ್ನು ನಿನ್ನೆ ನಡೆದ ಎರಡು ಚರ್ಚ್ ಗಳ ಮೇಲಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಈಜಿಪ್ಟ್ ನಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಈ ದಾಳಿ  ನಡೆಸಲಾಗಿದೆ ಎಂದು ಹೇಳಿಕೊಂಡಿದೆ

ಈಜಿಪ್ಟ್‌ನ 2 ಚರ್ಚ್ ಗಳಲ್ಲಿ ನಿನ್ನೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರರು ನಡೆಸಿದ ಪ್ರಬಲ ಬಾಂಬ್‌ ಸ್ಫೋಟದ ಪರಿಣಾಮ 45 ಮಂದಿ ಮೃತಪಟ್ಟಿದ್ದು, 120 ಮಂದಿ ಗಾಯಗೊಂಡಿದ್ದಾರೆ. ಟಂಟಾ ಮತ್ತು ಅಲೆಕ್ಸಾಂಡ್ರಿಯಾಗಳಲ್ಲಿ  ಘಟನೆ ನಡೆದಿದ್ದು, ಟಂಟಾದಲ್ಲಿನ ಮಾರ್‌ ಜಾರ್ಜಸ್‌ ಕಾಪ್ಟಿಕ್‌ ಚರ್ಚ್ ನಲ್ಲಿ ಪ್ರತಿ ಭಾನುವಾರ ಸೇರುವಂತೆಯೇ ನಿನ್ನೆಯೂ ಹಲವು ಕ್ರಿಶ್ಚಿಯನ್ನರು ಪ್ರಾರ್ಥನೆಗಾಗಿ ಸೇರಿದ್ದರು. ಈ ವೇಳೆ ಉಗ್ರನೊಬ್ಬ ಯಾರಿಗೂ ತಿಳಿಯದಂತೆ ಇಟ್ಟು  ಹೋದ ಬಾಂಬ್‌ ಸ್ಫೋಟವಾಗಿದ್ದು, 27 ಮಂದಿ ಬಲಿಯಾಗಿದ್ದಾರೆ. ಬಳಿಕ ಅಲೆಕ್ಸಾಂಡ್ರಿಯಾದ ಸೇಂಟ್‌ ಮಾರ್ಕ್ಸ್‌ ಚರ್ಚ್ ನಲ್ಲೂ ಆತ್ಮಾಹುತಿ ಉಗ್ರ ಸ್ಫೋಟಿಸಿಕೊಂಡಾಗ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com