ಸೌದಿ ಅರೇಬಿಯಾ ಪ್ರಜೆಗಳು ಇನ್ನು ಆದಾಯ ತೆರಿಗೆಯನ್ನೇ ಕಟ್ಟುವಂತಿಲ್ಲ!

ಸೌದಿ ಅರೇಬಿಯಾದಲ್ಲಿ ನೂತನ ಆರ್ಥಿಕ ನೀತಿಯನ್ನು ಬಿಡುಗಡೆ ಮಾಡಿದ್ದು, ನೂತನ ನೀತಿಯ ಅನ್ವಯ ಸೌದಿ ಅರೇಬಿಯಾ ಪ್ರಜೆಗಳು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುವಂತಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೋಹಾ: ಸೌದಿ ಅರೇಬಿಯಾದಲ್ಲಿ ನೂತನ ಆರ್ಥಿಕ ನೀತಿಯನ್ನು ಬಿಡುಗಡೆ ಮಾಡಿದ್ದು, ನೂತನ ನೀತಿಯ ಅನ್ವಯ ಸೌದಿ ಅರೇಬಿಯಾ ಪ್ರಜೆಗಳು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುವಂತಿಲ್ಲ.

ಕೇವಲ ಆದಾಯ ತೆರಿಗೆ ಮಾತ್ರವಲ್ಲದೇ ಕಂಪನಿಗಳ ಲಾಭಾಂಶ ತೆರಿಗೆಗೂ ಸೌದಿ ಅರೇಬಿಯಾ ಸರ್ಕಾರ ವಿನಾಯಿತಿ ನೀಡಿದೆ. ಈ ಬಗ್ಗೆ ಸ್ವತಃ ಸೌದಿ ಅರೇಬಿಯಾ ಸರ್ಕಾರದ ವಿತ್ತ ಸಚಿವ ಮಹಮದ್ ಅಲ್ ಜಡಾನ್ ಹೇಳಿದ್ದು,  ಪ್ರಸ್ತುತ ಸ್ಥಿತಿಯಲ್ಲಿ ಸೌದಿ ಪ್ರಜೆಗಳು ಹಾಗೂ ಸೌದಿ ಸಂಸ್ಥೆಗಳು ತೆರಿಗೆ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಸೌದಿ ಅರೇಬಿಯಾ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಸುಧಾರಣಾ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಕೇವಲ ಆದಾಯ  ತೆರಿಗೆ ವಿನಾಯಿತಿ ಮಾತ್ರವಲ್ಲದೇ 2018ರಿಂದ ಮೌಲ್ಯವರ್ಧಿತ ತೆರಿಗೆಯನ್ನು ಶೇ.5ಕ್ಕಿಂತ ಹೆಚ್ಚು ಮಾಡುವುದಿಲ್ಲ. ಇಂಧನ ಆದಾಯ ರಹಿತ ಪ್ರದೇಶಗಳಲ್ಲಿ 2020ರವರೆಗೂ ಇದು ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು.

ಸೌದಿಯ ಪ್ರಮುಖ ಆರು ರಾಜಪ್ರಭುತ್ವಗಳು ಈ ನೂತನ ಆರ್ಥಿಕ ನೀತಿಗೆ ಅನುಮೋದನೆ ನೀಡಿದೆ. ಇನ್ನು ತೆರಿಗೆ ವಿನಾಯಿತಿಯಿಂದ ಸೌದಿ ಅರೇಬಿಯಾ ಸರ್ಕಾರ ಬೊಕ್ಕಸಕ್ಕೆ ಆಗುವ ಹೊರೆಯನ್ನು ಯಾವ ರೀತಿ  ಸರಿದೂಗಿಸಲಾಗುತ್ತದೆ ಎಂಬ ಅಂಶವನ್ನು ತಿಳಿಸಿಲ್ಲ.

2014ರಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ಸೌದಿ ಸರ್ಕಾರ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ಸೌದಿ ಸರ್ಕಾರ  ಹೊಸ ತೆರಿಗೆ ನೀತಿ ಘೋಷಣೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com