ಡಮಾಸ್ಕಸ್: ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಟರ್ಕಿ, ಯುಎಇ, ಜೋರ್ಡಾನ್, ಕತಾರ್ ಸೇರಿದಂತೆ ಜಿ7 ವಿದೇಶಾಂಗ ಸಚಿವರು ಏ.11 ರಂದು ಸಭೆ ನಡೆಸಿ ಚರ್ಚಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ರಾಸಾಯನಿಕ ದಾಳಿ, ಅಮೆರಿಕಾದ ಪ್ರತಿದಾಳಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸಭೆಯ ನಂತರ ಮಾತನಾಡಿರುವ ಇಟಾಲಿಯ ವಿದೇಶಾಂಗ ಸಚಿವ ರಷ್ಯಾ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಒಗ್ಗೂಡಿ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಾಬಲ್ಯವನ್ನು ಕಿತ್ತೊಗೆಯಬೇಕು ಈ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಸಹಾಯ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಜಿ7 ಒಕ್ಕೂಟ ಭಯೋತ್ಪಾದನೆ, ಲಿಬಿಯಾದಲ್ಲಿನ ಅಸ್ಥಿರತೆ, ಉತ್ತರ ಕೋರಿಯಾದಲ್ಲಿನ ಕ್ಷಿಪಣಿ, ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆಯೂ ಕಾರ್ಯಸೂಚಿಗಳನ್ನು ಹೊಂದಿದೆ. ಸಭೆಯಲ್ಲಿ ಅಮೆರಿಕಾದ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್ ಸನ್ ಸಹ ಭಾಗಿಯಾಗಿದ್ದರು.