ವಿಶ್ವಸಂಸ್ಥೆಯಿಂದ ಮಲಾಲಾಗೆ ಅತ್ಯಂತ ಕಿರಿಯ ಶಾಂತಿದೂತ ಪಟ್ಟ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ 19 ವರ್ಷದ ಮಲಾಲ ಯೂಸೂಫ್ ಗೆ ಅತ್ಯಂತ ಕಿರಿಯ ಶಾಂತಿ ದೂತ ಪಟ್ಟವನ್ನು ಘೋಷಿಸಿದ್ದಾರೆ.
ಮಲಾಲ
ಮಲಾಲ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ 19 ವರ್ಷದ ಮಲಾಲ ಯೂಸೂಫ್ ಗೆ ಅತ್ಯಂತ ಕಿರಿಯ ಶಾಂತಿ ದೂತ ಪಟ್ಟವನ್ನು ಘೋಷಿಸಿದ್ದಾರೆ. 
ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆಂಟೋನಿಯೋ ಗುಟೆರಸ್, ವಿಶ್ವಸಂಸ್ಥೆಯ ಆದರ್ಶಗಳು ಮತ್ತು ಉದ್ದೇಶಗಳಿಗೆ ಮಲಾಲ ಸೇವೆ ಹಾಗೂ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನತೆಯ ಹಕ್ಕನ್ನು ಸಮರ್ಥಿಸಿಕೊಂಡ ಧೈರ್ಯಕ್ಕಾಗಿ ಅತ್ಯಂತ ಕಿರಿಯ ಶಾಂತಿದೂತ ಪಟ್ಟ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲಾಲ, ಮೆಸೆಂಜರ್ ಆಫ್ ಪೀಸ್ ಎಂಬ ಬಿರುದನ್ನು ಪಡೆಯುತ್ತಿರುವುದು ಅತ್ಯಂತ ಗೌರವ ಸೂಚಕವಾಗಿದೆ. ಈ ಸಂದರ್ಭದಲ್ಲಿ ತಾವು ಮತ್ತೊಮ್ಮೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಹಕ್ಕಿಗಾಗಿ ಆಗ್ರಹಿಸುವುದಾಗಿ ತಿಳಿಸಿದ್ದಾರೆ. 
ಪ್ರತಿ ಮಗುವಿಗೂ, ಪ್ರಮುಖವಾಗಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮೂಲಭೂತ ಹಕ್ಕಾಗಿದೆ, ಅದನ್ನು ಕಡೆಗಣಿಸುವಂತಿಲ್ಲ ಎಂದು ಮಲಾಲಾ ಹೇಳಿರುವುದು ವರದಿಯಾಗಿದೆ. 1997 ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ್ದ ಮಲಾಲಾ ಯೂಸೂಫ್ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತಾಲೀಬಾನ್ ಅಡ್ಡಿ ಉಂಟುಮಾಡುತ್ತಿರುವುದರ ವಿರುದ್ಧ ಧ್ವನಿ ಏರಿಸಿದ್ದರು. ಇದೇ ಕಾರಣಕ್ಕಾಗಿ ಮಲಾಲಾ ವಿರುದ್ಧ ಭಯೋತ್ಪಾದಕ ದಾಳಿಯೂ ನಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com