ಕುಲಭೂಷಣ್ ಬೆಂಬಲಕ್ಕೆ ನಿಂತ ಬಿಲಾವಲ್ ಭುಟ್ಟೋ; ಗಲ್ಲು ಶಿಕ್ಷೆಗೆ ವಿರೋಧ

ಕುಲಭೂಷಣ್ ಜಾದವ್ ಗೂಢಚಾರಿಯಲ್ಲ ಎಂಬ ಭಾರತದ ವಾದಕ್ಕೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪರೋಕ್ಷ ಬೆಂಬಲ ನೀಡಿದ್ದು, ಗೂಢಚಾರಿಕೆ ಪ್ರಕರಣದಲ್ಲಿ ಕುಲಭೂಷಣ್ ಪಾತ್ರ ಸಾಬೀತಾಗಿಲ್ಲ. ಆದರೂ ತರಾತುರಿಯಲ್ಲಿ ಗಲ್ಲುಶಿಕ್ಷೆ ಸರಿಯಲ್ಲ ಎಂದು ಬಿಲಾವಲ್ ಭಟ್ಟೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಾಹೋರ್: ಕುಲಭೂಷಣ್ ಜಾದವ್ ಗೂಢಚಾರಿಯಲ್ಲ ಎಂಬ ಭಾರತದ ವಾದಕ್ಕೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪರೋಕ್ಷ ಬೆಂಬಲ ನೀಡಿದ್ದು, ಗೂಢಚಾರಿಕೆ ಪ್ರಕರಣದಲ್ಲಿ ಕುಲಭೂಷಣ್ ಪಾತ್ರ ಸಾಬೀತಾಗಿಲ್ಲ. ಆದರೂ  ತರಾತುರಿಯಲ್ಲಿ ಗಲ್ಲುಶಿಕ್ಷೆ ಸರಿಯಲ್ಲ ಎಂದು ಬಿಲಾವಲ್ ಭಟ್ಟೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಗೂಢಾಚಾರಿಯೆಂದು ಹೇಳಲಾದ, ಸದ್ಯಕ್ಕೆ ಪಾಕಿಸ್ತಾನದ ಸೆರೆಯಲ್ಲಿರುವ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸರ್ಕಾರ ಗಲ್ಲು ಶಿಕ್ಷೆ ನೀಡಿರುವುದನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಅಧ್ಯಕ್ಷ ಹಾಗೂ  ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಟೀಕಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕುಲಭೂಷಣ್ ಅವರು ಗೂಢಚಾರಿಯಾಗಿದ್ದರೋ ಇಲ್ಲವೋ  ಎಂಬುದು ಇನ್ನೂ ಸಾಬೀತಾಗಿಲ್ಲ. ಅವರ ಪಾತ್ರವೇನು ಎಂಬುದೇ ಒಂದು ವಿವಾದವಾಗಿದೆ. ಹಾಗಿರುವಾಗ, ಪಾಕಿಸ್ತಾನ ಸರ್ಕಾರ ಅವರಿಗೆ ಹೇಗೆ ಗಲ್ಲು ಶಿಕ್ಷೆ ವಿಧಿಸಲು ಸಾಧ್ಯ'' ಎಂದು ಪ್ರಶ್ನಿಸಿದರು.

ಇದೇ ವೇಳೆ, ನವಾಜ್ ಷರೀಫ್ ಸರ್ಕಾರದ ವಿರುದ್ದ ಕಿಡಿ ಕಾರಿದ ಅವರು, ''ಕುಲಭೂಷಣ್ ಅವರ ಪ್ರಕರಣವೇನು, ಅವರನ್ನೇಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂಬುದರ ಸ್ಪಷ್ಟವಾದ ದಾಖಲೆಗಳನ್ನು ನೀಡಿ, ಆರೋಪವನ್ನು  ವಿಶ್ವದ ಮುಂದೆ ಸಾಬೀತುಪಡಿಸುವಲ್ಲಿ ಷರೀಫ್ ಸರ್ಕಾರ ವಿಫಲವಾಗಿದೆ. ಅಲ್ಲದೆ, ಭಾರತದಲ್ಲೇನಾದರೂ ಪಾಕಿಸ್ತಾನದ ಬೇಹುಗಾರ ಸಿಕ್ಕಿಬಿದ್ದಿದ್ದರೆ, ಅದು ಮೊದಲು ತನ್ನ ಆರೋಪವನ್ನು ಸಾಬೀತುಪಡಿಸುತ್ತಿತ್ತು'' ಎಂದು ಹೇಳಿದ್ದಾರೆ.

ಗಲ್ಲು ಶಿಕ್ಷೆಗೆ ತನ್ನ ವಿರೋಧ
ಇದೇ ವೇಳೆ ತಾನು ಮತ್ತು ತನ್ನ ಪಕ್ಷ ಗಲ್ಲು ಶಿಕ್ಷೆಯ ವಿರುದ್ಧವಾಗಿದ್ದು, ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com