ನ್ಯೂಯಾರ್ಕ್: ಕಳೆದ ಹಲವು ವರ್ಷಗಳಿಂದ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಸಿಲಿಕಾನ್ ವ್ಯಾಲಿ ಸಿಇಒಗೆ ಅಮೆರಿಕ ಕೋರ್ಟ್ ಕೇವಲ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಅಮೆರಿಕ ಮಾಧ್ಯಮಗಳ ವರದಿ ಪ್ರಕಾರ, 38 ವರ್ಷದ ಅಭಿಷೇಕ್ ಗಟ್ಟಾನಿಗೆ ಕ್ಯಾಲಿಫ್ರೊರ್ನಿಯಾದ ಸಂತಾ ಕ್ಲೇರಾ ಸೂಪಿರಿಯರ್ ಕೋರ್ಟ್ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಅಭಿಷೇಕ್ ಜೊತೆ ಮದುವೆಯಾಗಿ 10 ವರ್ಷ ಕಳೆದಿದೆ. ತಮ್ಮ ಎರಡು ವರ್ಷದ ಮಗಳ ಮುಂದೆಯೇ ತನ್ನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿ, ಕರಾಳ ಮುಖವನ್ನು ತೋರಿಸಿದ್ದಾರೆ ಎಂದು 36 ವರ್ಷದ ಪತ್ನಿ ನೇಹಾ ರಸ್ತೋಗಿ ಆರೋಪಿಸಿದ್ದಾರೆ.
ಇನ್ನು ಪತ್ನಿಗೆ ಯಾವುದೇ ಕಿರುಕುಳ ನೀಡಿಲ್ಲ. ತಮಗೆ ಜಾಮೀನು ನೀಡಬೇಕೆಂದು ಗುಟ್ಟಾನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು.
ಅಪರಾಧದ ತೀವ್ರತೆಯನ್ನು ಕಡಿತಗೊಳಿಸಿ. ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಪತ್ನಿಗೆ ಕಿರುಕುಳ ನೀಡಿದ ಆರೋಪಕ್ಕೆ 6 ತಿಂಗಳ ಜೈಲು ಶಿಕ್ಷೆಯಾಗಬೇಕಿತ್ತು. ಆದರೆ ಒಂದು ತಿಂಗಳು ಮಾತ್ರ ಶಿಕ್ಷೆ ವಿಧಿಸಲಾಗಿದೆ.