ಚಿಲಿಯಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆ ದಾಖಲು

ಚಿಲಿಯಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಬರೊಬ್ಬರಿ 6.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸ್ಯಾಂಟಿಯಾಗೋ: ಚಿಲಿಯಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಬರೊಬ್ಬರಿ 6.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.

ಕೇಂದ್ರ ಚಿಲಿಯ ವಲ್ಪರೈಸೋ ನಗರದ ಸುಮಾರ 38 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಕರಾವಳಿ ತೀರಗಳಲ್ಲಿ ಭಾರಿ ಪ್ರಮಾಣದ ಅಲೆಗಳು ಏಳಲಿವೆ ಎಂದು ತಿಳಿಸಿದ್ದಾರೆ. ಸುನಾಮಿ ಎಚ್ಚರಿಕೆಯನ್ನು  ನೀಡದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕರಾವಳಿ ತೀರದ ನಿವಾಸಿಗಳು ಕೂಡಲೇ ಎತ್ತರದ ಪ್ರದೇಶಕ್ಕೆ ರವಾನೆಯಾಗುವಂತೆ ಸೂಚನೆ ನೀಡಿದ್ದಾರೆ.

ಚಿಲಿಯ ರಾಷ್ಟ್ರೀಯ ತುರ್ತು ಪರಿಸ್ಥಿತಿ ಏಜೆನ್ಸಿ ಈ ವರೆಗೂ ಯಾವುದೇ ರೀತಿಯ ಸಾವುನೋವುಗಳಾದ ಕುರಿತು ವರದಿ ನೀಡಿಲ್ಲ. ಚಿಲಿಯಲ್ಲಿರುವ ಭೂಕಂಪನ ಪ್ರದೇಶ ರಿಂಗ್ ಆಫ್ ಫೈರ್ ವ್ಯಾಪ್ತಿಯಲ್ಲೇ ಭೂಕಂಪನ ಸಂಭವಿಸಿದೆ  ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2015ರಲ್ಲಿ ಉತ್ತರ ಚಿಲಿಯಲ್ಲಿ ಸಂಭವಿಸಿದ ಭೀಕರ 8.3ರಷ್ಟು ತೀವ್ರತೆಯ ಭಾರಿ ಭೂಕಂಪನದಿಂದಾಗಿ ಸುನಾಮಿ ಅಲೆಗಳು ಎದ್ದಿದ್ದವು. ಪರಿಣಾಮ 2015ರ ಸೆಪ್ಟೆಂಬರ್ ನಲ್ಲಿ 15 ಮಂದಿ ಸಾವಿಗೀಡಾಗಿದ್ದರು. ಅಂತೆಯೇ 2010ರಲ್ಲಿ  ಸಂಭವಿಸಿದ್ದ 8.8ರಷ್ಟು ತೀವ್ರತೆ ಭೂಕಂಪನದಿಂದಾಗಿ ಬರೊಬ್ಬರಿ 500 ಮಂದಿ ಸಾವಿಗೀಡಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com