
ಮನಿಲಾ: ದ್ವೀಪ ರಾಷ್ಟ್ರ ಫಿಲಿಫೈನ್ಸ್ ನಲ್ಲಿ ಶನಿವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ.
ದಕ್ಷಿಣ ಫಿಲಿಫೈನ್ಸ್ ನ ಮಿಂದನಾವೋ ಪ್ರಾಂತ್ಯದ 41 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಅಮೆರಿಕದ ಭೂಗರ್ಭ ಸರ್ವೇಕ್ಷಣ ಇಲಾಖಾಧಿಕಾರಿಗಳು ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭೂಮಿ ನಡುಗಿದ ತೀವ್ರತೆಗೆ ಅನೇಕ ಫಿಲಿಫೈನ್ಸ್ ನಲ್ಲಿ ಹಲವು ಕಟ್ಟಡಗಳು ಹಾನಿಗೊಂಡಿದ್ದು, ಆಸ್ಪತ್ರೆ ಮತ್ತು ಇತರ ಎರಡು ಸರಕಾರಿ ಕಟ್ಟಡಗಳಲ್ಲಿ ತೀವ್ರವಾದ ಬಿರುಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಅಂತೆಯೇ ಹಲವು ಮರಗಳು ಉರುಳಿಬಿದ್ದಿದ್ದು, ಹೆದ್ದಾರಿ ರಸ್ತೆಗಳು ಬಿರುಕು ಬಿಟ್ಟಿವೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Advertisement