ವಾಷಿಂಗ್ ಟನ್: ನೀಲಮ್ ಮತ್ತು ಚೆನಾಬ್ ನದಿ ಪಾತ್ರದಲ್ಲಿ ಭಾರತ ಕಿಶನ್ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿಯ ಬಗ್ಗೆ ಭಾರತ-ಪಾಕಿಸ್ತಾನದ ನಡುವೆ ಮಾತುಕತೆ ಮುಂದುವರೆದಿದ್ದು, ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.
ಸದ್ಭಾವನೆ ಮತ್ತು ಸಹಕಾರ ಆಶಯದ ಅಡಿಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಈ ವಾರ ಸಭೆ ನಡೆದಿದ್ದು, ಉಭಯ ಪಕ್ಷಗಳೂ ಮಾತುಕತೆಯನ್ನು ಮುಂದುವರೆಸಲು ಒಪ್ಪಿಗೆ ಸೂಚಿಸಿದ್ದು, ಸೆಪ್ಟೆಂಬರ್ ನಲ್ಲಿ ವಾಷಿಂಗ್ ಟನ್ ಡಿಸಿಯಲ್ಲಿ ಮತ್ತೊಮ್ಮೆ ಸಭೆ ನಡೆಯಲಿದೆ ಎಂದು ವಿಶ್ವಬ್ಯಾಂಕ್ ಹೇಳಿಕೆಯನ್ನು ಪ್ರಕಟಿಸಿದೆ.
ಕಿಶನ್ ಗಂಗಾ ಯೋಜನೆಗೆ ಸಂಬಂಧಿಸಿದಂತೆ ಆ.02 ರಂದು ಪ್ರಕಟವಾಗಿರುವ ವರದಿಗಳನ್ನು ವಿಶ್ವಬ್ಯಾಂಕ್ ತಪ್ಪು ಎಂದು ಹೇಳಿದ್ದು, ಈ ಸ್ಪಷ್ಟನೆ ನೀಡಿದೆ.