ಹಮಾಸ್ ಉಗ್ರಗಾಮಿಗಳ ಸುರಂಗಕ್ಕೆ ಇಸ್ರೇಲ್ ನಿಂದ ಪ್ರತಿಬಂಧಕ ಗೋಡೆ ನಿರ್ಮಾಣ

ಹಮಾಸ್ ಉಗ್ರಗಾಮಿ ಸಂಘಟನೆಗಳ ಡಾಳಿ ಬೆದರಿಕೆ ಹಿನ್ನೆಲೆಯೆಲ್ಲಿಇಸ್ರೇಲ್ ಗಾಝಾ ಪಟ್ಟಿಯ ಗಡಿಯುದ್ದಕ್ಕೂ ಬೃಹತ್ತಾದ ಗೋಡೆ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದೆ.
ಗಾಝಾ ಪಟ್ಟಿಯಲ್ಲಿ ಗೋಡೆ ನಿರ್ಮಾಣ ಕಾಮಗಾರಿ
ಗಾಝಾ ಪಟ್ಟಿಯಲ್ಲಿ ಗೋಡೆ ನಿರ್ಮಾಣ ಕಾಮಗಾರಿ
ಕಿಬ್ಬುಟ್ಜ್ ನಿರಿಮ್: ಹಮಾಸ್ ಉಗ್ರಗಾಮಿ ಸಂಘಟನೆಗಳ ಡಾಳಿ ಬೆದರಿಕೆ ಹಿನ್ನೆಲೆಯೆಲ್ಲಿಇಸ್ರೇಲ್ ಗಾಝಾ ಪಟ್ಟಿಯ ಗಡಿಯುದ್ದಕ್ಕೂ ಬೃಹತ್ತಾದ ಗೋಡೆ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದೆ.
ಕ್ರೇನ್ ಗಳನ್ನು ಬಳಸಿ ಇಸ್ರೇಲ್ ಈಗಾಗಲೇ ಗಡಿಯುದ್ದಕ್ಕೂ ಕಾಮಗಾರಿ ಪ್ರಾರಂಭಿಸಿದೆ. ಅತ್ಯಾಧುನಿಕ ಸೆನ್ಸಾರ್ ಗಳನ್ನು ಒಳಗೊಂಡಿರುವ ಗೋಡೆ ಗಡಿ ಭಾಗದ ಒಟ್ಟು 60 ಕಿಲೋಮೀಟರ್ ಉದ್ದಕ್ಕೂ ನಿರ್ಮಾಣವಾಗಲಿದೆ.
ಎಷ್ಕೋಲ್ ಪ್ರಾದೇಶಿಕ ಪರಿಷತ್ತಿನ ಮುಖ್ಯಸ್ಥ ಗಾಡಿ ಯಾರ್ಕೊನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಯೋಜನೆಯು ಸ್ಥಳೀಯ ಯುವಕರನ್ನು ಆಕರ್ಷಿಸಿರುವುದರ  ಜತೆಗೆ ಕಳೆದ ಮೂರು ವರ್ಷಗಳಿಂದ ಹಮಾಸ್ ಉಗ್ರವಾದಿಗಳೊಡನೆ ಹೋರಾಡುವುದಕ್ಕೆ  ಸಹಕಾರಿಯಾಗಲಿದೆ ಎಂದಿದ್ದಾರೆ.
"ತಡೆಗೋಡೆ ನಿರ್ಮಾಣ ಮಾಡುವುದು ಸರಿಯಾದ ಕ್ರಮ. ಇದರಿಂದ ಸ್ಥಳೀಯರಿಗೆ ಅನುಕೂಲವಾಗುವುದಲ್ಲದೆ ಈ ಹಿಂದಿನ ಸುರಂಗದ ಕುರಿತಾದ ವಿವಾದವನ್ನೂ ಬಗೆಹರಿಸಬಹುದು. ಪ್ರತಿಬಂಧಕ ಗೋಡೆ ನಿರ್ಮಾಣವಾಗುವುದರಿಂದ  ಮುಂದಿನ ದಿನಗಳಲ್ಲಿ ಈ ಪ್ರದೇಶ ಆರ್ಥಿಕವಾಗಿ ಅಭಿವೃದ್ದಿ ಹೊಂದುವುದರಲ್ಲಿ ಯಾವ ಅನುಮಾನವಿಲ್ಲ." ಅವರು ತಿಳಿಸಿದ್ದಾರೆ. 2014 ರ ಯುದ್ದದ ಸಮಯದಲ್ಲಿ ಹಮಾಸ್ ಉಗ್ರಗಾಆಮಿಗಳು ಇಸ್ರೇಲ್ ನ ಒಳಗೆ ನುಸುಳಲುಹಲವಾರು ಸುರಂಗಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಅವರು ನಾಗರಿಕ ಪ್ರದೇಶಗಳನ್ನು ಪ್ರವೇಶಿಸುವುದನ್ನು ಇಸ್ರೇಲ್ ಸೇನೆ ವಿಫಲಗೊಳಿಸಿತ್ತು. ಇಸ್ರೇಲ್ ನಾಗರಿಕರಲ್ಲಿ ಮಾತ್ರ ಹಮಾಸ್ ಉಗ್ರರ ಕುರಿತಂತೆ ಭಯ ಪ್ರಾರಂಭವಾಗಿತ್ತು. ಇಸ್ರೇಲ್, ಉಗ್ರರು ನಿರ್ಮಿಸಿದ್ದ ಒಟ್ಟು 32 ಸುರಂಗಗಳನ್ನು ನಾಶ ಪಡಿಸಿತ್ತು.
ಸುರಕ್ಷತೆಯ ದೃಷ್ಟಿಯಿಂದ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಮಾದ್ಯಮಕ್ಕೂ ಹೆಚ್ಚಿನ ವಿಷಯಗಳನ್ನು ಬಹಿರಂಗ ಪಡಿಸಿಲ್ಲ. ಅದೊಂದು ಕಡೆಯಲ್ಲಿ "ಮಿಲಿಟರಿ ವಲಯ, ಸಾಮಾನ್ಯರಿಗೆ ಪ್ರವೇಶ ನಿಷೇಧ" ನೆಂದು ಬರೆಯಲಾದ ಫಲಕವನ್ನು ಹಾಕಲಾಗಿದೆ. ಇದುವರೆಗೂ ತಡೆಗೋಡೆ ನಿರ್ಮಾಣದಲ್ಲಿ ಒಟ್ಟು ಎಷ್ಟು ಕ್ರೇನ್, ಬುಲ್ಡೋಜರ್ ಕೆಲಸ ಮಾಡುತ್ತಿವೆ ಎನ್ನುವುದು ತಿಳಿದಿಲ್ಲ.
ಇಸ್ರೇಲ್ ದಕ್ಷಿಣ ಕಮಾಂಡ್ ಮುಖ್ಯಸ್ಥ ಮೇಜರ್ ಜನರಲ್ ಐಲ್ ಜಮಿರ್ ಕಳೆದ ವಾರ ಈ ಯೋಜನೆ ಪೂರ್ಣಗೊಳ್ಳಲು ಸುಮಾರು ಎರಡು ವರ್ಷ ಬೇಕಾಗಬಹುದು ಎಂದು ವರದಿಗಾರರಿಗೆ ತಿಳಿಸಿದ್ದರು. ತಡೆಗೋಡೆ ನೆಲದ ಮೇಲೆ ಮತ್ತು ಕೆಳಗೆ ಹಲವಾರು ಮೀಟರ್ ವಿಸ್ತರಿಸಲಿದೆ ಮತ್ತು ಅತ್ಯಾಧುನಿಕ ಸಂವೇದಕಗಳನ್ನು ಅಳವಡಿಸುವುದರೊಡನೆ ಹಮಾಸ್ ಜತೆ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ಇದನ್ನು ನಿರ್ಮಿಸಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com