ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ: ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಟ್ರಂಪ್ ಸಮ್ಮತಿ

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆ ಮಾಡುವ ಮೂಲಕ ಕರೆ ಮಾಡಿ ಶುಭಾಶಯಗಳನ್ನು ಕೋರಿದ್ದು, ಈ ವೇಳೆ ಉಭಯ ನಾಯಕರು...
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆ ಮಾಡುವ ಮೂಲಕ ಕರೆ ಮಾಡಿ ಶುಭಾಶಯಗಳನ್ನು ಕೋರಿದ್ದು, ಈ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ಮಾತುಕತೆ ವೇಳೆ ಉಭಯ ದೇಶಗಳ ನಾಯಕರು ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲು ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 
ಡೋಕ್ಲಾಮ್ ವಿವಾದ ಸಂಬಂಧ ಭಾರತ ಚೀನಾ ಜೊತೆಗೆ ಸಂಘರ್ಷಕ್ಕಿಳಿದಿರುವ ನಡುವೆಯೇ ಈ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. 
ದೂರವಾಣಿ ಸಂಭಾಷಣೆಯ ವೇಳೆ, ಮುಂದಿನ ತಿಂಗಳು ಅಮೆರಿಕದಿಂದ ಮೊದಲ ಬಾರಿ ಭಾರತಕ್ಕೆ ಕಚ್ಚಾತೈಲ ಪೂರೈಕೆ ಆಗುತ್ತಿರುವುದನ್ನು ಟ್ರಂಪ್ ಸ್ವಾಗತಿಸಿದ್ದಾರೆ. ಭಾರತಕ್ಕೆ ವಿಶ್ವಾಸಾರ್ಹ ಮತ್ತು ದೀರ್ಘಾಕಾಲೀನ ತೈಲ ಪೂರೈಕೆಯನ್ನು ಅಮೆರಿಕ ಮುಂದುವರೆಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. 
ಸಚಿವಾಲಯದ ದ್ವಿಪಕ್ಷೀಯ ಮಾತುಕತೆಯ ಮೂಲಕ ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಮೋದಿ ಮತ್ತು ಟ್ರಂಪ್ ಸಹಮತ ವ್ಯಕ್ತಪಡಿಸಿದ್ದಾರೆ. 
ಇಬ್ಬರೂ ಮುಖಂಡರು ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಉದ್ಯೋಗ ಮೇಳವನ್ನು ನೋಡುತ್ತಿದ್ದಾರೆ. ಉತ್ತರ ಕೊರಿಯಾ ಬಿಕ್ಕಟ್ಟಿನ ವಿರುದ್ಧ ವಿಶ್ವವನ್ನು ಒಂದುಗೂಡಿಸಿದ ಶಕ್ತಿಶಾಲಿ ನಾಯಕತ್ವಕ್ಕಾಗಿ ಟ್ರಂಪ್ ಅವರಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com