
ಬಾರ್ಸಿಲೋನಾ: ಸ್ಪೇನ್ ನ ಬಾರ್ಸಿಲೋನಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿರುವ ಭೀಕರ ಉಗ್ರ ದಾಳಿಯನ್ನು ವಿಶ್ವನಾಯಕರು ಒಕ್ಕೋರಲಿನಿಂದ ಖಂಡಿಸಿದ್ದು, ಇದೊಂದು ಕಪ್ಪುದಿನ ಎಂದು ಹೇಳಿದ್ದಾರೆ.
ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬ್ರಿಟನ್ ಸ್ಪೇನ್ ನೊಂದಿಗೆ ಇದ್ದು, ಸಕಲ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ. ಅಂತೆಯೇ ಸ್ಪೇನ್ ನ ರಾಜ ಕುಟುಂಬ ಕೂಡ ಸ್ಪೇನ್ ಉಗ್ರ ದಾಳಿಯನ್ನು ಖಂಡಿಸಿದ್ದು, ಸಾವಿಗೀಡಾದವರ ಆತ್ನಕ್ಕೆ ಶಾಂತಿ ಕೋರಿದೆ. ಅಂತೆಯೇ ದಾಳಿಗೆ ತುತ್ತಾದ ವಿಶ್ವ ವಿಖ್ಯಾತ ಲಾಸ್ ರಂಬ್ಲಾಸ್ ತಾಣ ಶೀಘ್ರದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿ ಎಂದು ಆಶಿಸಿದೆ.
ಅಂತೆಯೇ ಸ್ಪೇನ್ ನ ಪ್ರಧಾನಿ ಮರಿಯಾನೋ ರಾಜೋಯ್ ಅವರು ದಾಳಿಯನ್ನು ಖಂಡಿಸಿದ್ದು, ಸ್ವಾತಂತ್ರ್ಯ ಪ್ರೀತಿಸುವ ಜನರ ಒಗ್ಗಟ್ಟನ್ನು ದೌರ್ಜನ್ಯದ ಮೂಲಕ ಒಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಅಂತೆಯೇ ಬಾರ್ಸಿಲೋನಾ ರಾಷ್ಟ್ರೀಯ ಫುಟ್ ಬಾಲ್ ತಂಡ ಕೂಡ ದಾಳಿಯನ್ನು ಖಂಡಿಸಿದ್ದು, ದಾಳಿಯಿಂದಾಗಿ ಸಾಕಷ್ಟು ನೋವಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದೆ.
ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮಾಕ್ರನ್ ಅವರೂ ಕೂಡ ದಾಳಿಯನ್ನು ಖಂಡಿಸಿದ್ದು, ಅಹಿಂಸೆಯ ವಿರುದ್ಧದ ದಾಳಿ ಇದಾಗಿದೆ ಎಂದು ಖಂಡಿಸಿದ್ದಾರೆ. ಅಂತೆಯೇ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳೊಂದಿಗೆ ಫ್ರಾನ್ಸ್ ಇದ್ದು, ಸ್ಪೇನ್ ಗೆ ನೆರವು ನೀಡಲಿದೆ. ಭಯೋತ್ಪಾದನೆ ವಿರುದ್ಧದ ಹೊರಾಟದಲ್ಲಿ ತಾವು ಸ್ಪೇನ್ ನೊಂದಿಗೆ ಇದ್ದು, ವಿಶ್ವದ ಎಲ್ಲ ದೇಶಗಳೂ ಒಗ್ಗೂಡಿಲಿದೆ ಎಂದು ಹೇಳಿದ್ದಾರೆ.
Advertisement