ಟ್ರಂಪ್ ವಿರೋಧಿ ಅಂಕಣ ಬರೆದಿದ್ದಕ್ಕೆ ಜನಾಂಗೀಯ ನಿಂದನೆ ಎದುರಿಸಿದ ಭಾರತೀಯ ಮೂಲದ ಸಿಇಒ

ವರ್ಜಿನಿಯಾದ ಚಾರ್ಲೊಟ್ಟೆಸ್ವಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿ...
ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀನ್ ಗಾಂಧಿ
ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀನ್ ಗಾಂಧಿ
ವಾಷಿಂಗ್ಟನ್: ವರ್ಜಿನಿಯಾದ ಚಾರ್ಲೊಟ್ಟೆಸ್ವಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿ ಸಿಎನ್ ಬಿಸಿಯ ವೆಬ್ ಸೈಟ್ ನಲ್ಲಿ ಕಳೆದ ವಾರ ಬರೆದ ಅಂಕಣಕ್ಕೆ  ಚಿಕಾಗೊ ಕಂಪೆನಿಯಲ್ಲಿ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಜನಾಂಗೀಯವಾಗಿ ನಿಂದಿಸಿರುವ ಘಟನೆ ನಡೆದಿದೆ.
 ಭಾರತೀಯ ಮೂಲದ ರವಿನ್ ಗಾಂಧಿಯವರು ಕಳೆದ ವಾರ ಟ್ರಂಪ್ ವಿರೋಧಿ ಅಂಕಣವನ್ನು ಬರೆದಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದು ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿದೆ. ತಮ್ಮ ಅಂಕಣ ಪ್ರಕಟಗೊಂಡ ಮರುದಿನವೇ ಮಹಿಳೆಯೊಬ್ಬರಿಂದ ವಾಯ್ಸ್ ಮೇಲ್ ಬಂದಿತ್ತು ಎಂದು ಗಾಂಧಿ ಹೇಳಿದ್ದಾರೆ. ಕೇವಲ 15  ಸೆಕೆಂಡ್ ಗಳಲ್ಲಿ ಅನಾಮಧೇಯ ಕರೆಯಲ್ಲಿ ಮಹಿಳೆ ಕಟುವಾಗಿ ಟೀಕಿಸಲು ಆರಂಭಿಸಿದರು ಎಂದು ಹೇಳಿದ್ದಾರೆ.
ನಿಮ್ಮ ಕಸವನ್ನು ತೆಗೆಯಿರಿ, ಭಾರತಕ್ಕೆ ವಾಪಸ್ ಹೋಗಿ, ಅಲ್ಲಿ ಇದನ್ನು ಮಾರಟ ಮಾಡಿ. ನಮಗೆ ಡೊನಾಲ್ಡ್ ಟ್ರಂಪ್ ಬಗ್ಗೆ ಹೇಳಬೇಡಿ, ಈ ದೇಶದ ಬಗ್ಗೆ ನಮಗೆ ಹೇಳಿಕೊಡಲು ಬರಬೇಡಿ, ಭಾರತದಲ್ಲಿ ಹಂದಿಗಳು ವಾಸಿಸುವಲ್ಲಿಗೆ ಹೋಗಿ, ನಿಮ್ಮ ಕೊಳಕು ದೇಶವನ್ನು ಸ್ವಚ್ಛ ಮಾಡಿ, ಅಲ್ಲಿ ಕೊಳಕು, ಗಲೀಜು ತುಂಬಿಕೊಂಡು ಅಸ್ತವ್ಯಸ್ತವಾಗಿದೆ ಎಂದು ಮಹಿಳೆ ವಾಯ್ಸ್ ಮೇಲ್ ನಲ್ಲಿ ರವಿನ್ ಗಾಂಧಿಯನ್ನು ಬೈದಿದ್ದಾರೆ.
44 ವರ್ಷದ ರವಿನ್ ಗಾಂಧಿ ಅಮೆರಿಕಾದಲ್ಲಿ ಜನಿಸಿ ಚಿಕಾಗೊ ಉಪ ನಗರದಲ್ಲಿ ಬೆಳೆದಿದ್ದಾರೆ. ಇವರು ಜಿಎಂಎಂ ನಾನ್ ಸ್ಟಿಕ್ ಕೋಟಿಂಗ್ಸ್ ಎಂಬ ಜಾಗತಿಕ ಮಟ್ಟದಲ್ಲಿ ಕುಕ್ ವೇರ್, ಬೇಕ್ ವೇರ್ ಕೋಟಿಂಗ್ ಮೊದಲಾದವುಗಳನ್ನು ಪೂರೈಸುವ ಕಂಪೆನಿಯಾಗಿದೆ. ಇವರು ಕಳೆದ ವಾರ ಚಾರ್ಲೊಟ್ಟೆಸ್ವಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಟ್ರಂಪ್ ನ್ನು ವಿರೋಧಿಸಿ ಅಂಕಣ ಬರೆದಿದ್ದರು. ಅದಕ್ಕೆ ಓದುಗರಿಂದ ಅಷ್ಟೇ ವೇಗವಾಗಿ ನಿಂದನೆ,ಟೀಕೆಗಳು ಬಂದಿದ್ದವು ಎಂದು ಚಿಕಾಗೊ ಟ್ರಿಬ್ಯೂನ್ ವರದಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ರವಿನ್ ಗಾಂಧಿ, ಆರಂಭದಲ್ಲಿ ಈ ಮೇಲ್ ನೋಡಿ ತಮಗೆ ಆಘಾತವಾಯಿತು, ಆದರೆ ನಂತರ ಅದನ್ನು ತಮಾಷೆಯಾಗಿ ಸ್ವೀಕರಿಸಿದೆ ಎಂದಿದ್ದಾರೆ.
ಮಹಿಳೆಯಿಂದ ಬಂದ ಈ ವಾಯ್ಸ್ ಮೇಲ್ ನನ್ನೊಳಗೆ ಭಾವನೆಗಳನ್ನು ಎಬ್ಬಿಸಿದೆ. ನನಗೆ ಇದರಿಂದ ಅವಮಾನವಾಗಿಲ್ಲ. ಅಜ್ಞಾನಿಗಳಿಗೆ ಅರಿವು ಮೂಡಿಸಬೇಕೆಂದು ನನ್ನ ಬಯಕೆಯಾಗಿದೆ. ಅಮೆರಿಕಾ ವಲಸಿಗರ ದೇಶವಾಗಿದೆ. ನಾನು ವಲಸಿಗರ ಪುತ್ರನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಮುಸ್ಲಿಮರಿಗೆ ನಿಷೇಧ ಹೇರುವ ಟ್ರಂಪ್ ನೀತಿಯನ್ನು ವಿರೋಧಿಸುವುದಾಗಿ ರವಿನ್ ಗಾಂಧಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com