ಕ್ಷಿಪಣಿ ಪರೀಕ್ಷೆ ವೀಡಿಯೋ ಬಿಡುಗಡೆಗೊಳಿಸಿದ ದ.ಕೊರಿಯಾ

ದಕ್ಷಿಣ ಕೊರಿಯಾವು ತಾನು ನಡೆಸಿದ ಕ್ಷಿಪಣಿ ಪರೀಕ್ಷೆಯ ವೀಡಿಯೋ ತುಣುಕನ್ನು ಬಿಡುಗಡೆ ಮಾಡಿದೆ.
ಕ್ಷಿಪಣಿ ಪರೀಕ್ಷೆ ವೀಡಿಯೋ ಬಿಡುಗಡೆಗೊಳಿಸಿದ ದ.ಕೊರಿಯಾ
ಕ್ಷಿಪಣಿ ಪರೀಕ್ಷೆ ವೀಡಿಯೋ ಬಿಡುಗಡೆಗೊಳಿಸಿದ ದ.ಕೊರಿಯಾ
ಸಿಯೋಲ್: ದಕ್ಷಿಣ ಕೊರಿಯಾವು ತಾನು ನಡೆಸಿದ ಕ್ಷಿಪಣಿ ಪರೀಕ್ಷೆಯ ವೀಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಉತ್ತರ ಕೊರಿಯಾ ನಡೆಸಿದ್ದ ಕ್ಷಿಪಣಿ ಉಡಾವಣೆಗೆ ಪ್ರತಿಕ್ರಿಯೆಯಾಗಿ ಈ ವೀಡಿಯೋವನ್ನು ಬಿಡುಗಡೆ ಮಾಡಿದ್ದು ತಾನು ಕಳೆದ ವಾರ ಈ ಕ್ಷಿಪಣಿ ಪರೀಕ್ಷೆ ನಡೆಸಿರುವುದಾಗಿ ದಕ್ಷಿಣ ಕೊರಿಯಾ ಹೇಳಿದೆ.
ಆಗಸ್ಟ್ 24 ರಂದು 800 ಕಿ.ಮೀ ಮತ್ತು 500 ಕಿ.ಮೀ.ವ್ಯಾಪ್ತಿಯಲ್ಲಿ ಎರಡು ರೀತಿಯ ಹೊಸ ಕ್ಷಿಪಣಿಗಳ ಪರೀಕ್ಷೆಗಳನ್ನು ದಕ್ಷಿಣ ಕೊರಿಯಾದ ಮಿಲಿಟರಿ ನಡೆಸಿದೆ ಎಂದು ಹೇಳಲಾಗಿದ್ದು ಕ್ಷಿಪಣಿಗಳ ಪರೀಕ್ಷೆಯು ಯಶಸ್ವಿಯಾಗಿದೆ ಎಂದು ಅಲ್ಲಿನ ಮಿಲಿಟರಿ ವಿಭಾಗವು ಸ್ಪಷ್ಟನೆ ನೀಡಿದೆ.
ಈ ವೀಡಿಯೋದಲ್ಲಿ ತೋರಿಸಿರುವ ಕ್ಷಿಅಣಿಯು ಸುದೀರ್ಘ ಶ್ರೇಣಿಯದ್ದಾಗಿದ್ದು ಟ್ರಕ್-ಮೌಂಟೆಡ್ ಲಾಂಚರ್ ನಿಂದ ಕ್ಷಿಪಣಿ ಉಡಾವಣೆಗೊಳ್ಳುತ್ತಿದೆ.ಈ ಕ್ಷಿಪಣಿಯು ಭೂ ಕಕ್ಷೆ ಆಧಾರಿತ ಗುರಿಯನ್ನು ಯಶಸ್ವಿಯಾಗಿ ತಲುಪಬಲ್ಲದಾಗಿದೆ.
ದಕ್ಷಿಣ ಕೊರಿಯಾವು ಈ ಕ್ಷಿಪಣಿಗೆ ಇನ್ನೂ ಸಹ ಅಧಿಕೃತವಾಗಿ ಹೆಸರು ನೀಡಿಲ್ಲವಾದರೂ ಈಗ ಆ ಕ್ಷಿಪಣಿಯನ್ನು , ತಾತ್ಕಾಲಿಕವಾಗಿ ಹ್ಯುನ್ಮೊ-2 ಸಿ ಎಂದು ಕರೆಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com