ಪಾಕ್ ಜೈಲುಗಳಲ್ಲಿ 500ಕ್ಕೂ ಹೆಚ್ಚು ಭಾರತೀಯರು ಬಂಧಿಯಾಗಿದ್ದಾರೆ: ವರದಿ

ಸುಮಾರು 500ಕ್ಕೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂಬ ಆತಂಕಕಾರಿ ಸುದ್ದಿ ಬಹಿರಂಗಗೊಂಡಿದೆ...
ಕೈದಿಗಳು
ಕೈದಿಗಳು
ಲಾಹೋರ್: ಸುಮಾರು 500ಕ್ಕೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂಬ ಆತಂಕಕಾರಿ ಸುದ್ದಿ ಬಹಿರಂಗಗೊಂಡಿದೆ. 
ಪಾಕಿಸ್ತಾನ ಜೈಲಿನಲ್ಲಿ ಸುಮಾರು 527 ಭಾರತೀಯರು ಸೇರಿದಂತೆ 966 ವಿದೇಶಿಗರು ಬಂಧಿಯಾಗಿದ್ದಾರೆ. ಭಾರತೀಯರ ಪೈಕಿ ಹೆಚ್ಚಿನವರು ಮೀನುಗಾರರಾಗಿದ್ದು ಇನ್ನುಳಿದಂತೆ ಭಯೋತ್ಪಾದನೆ, ಕೊಲೆ, ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಪ್ರವೇಶ ಒಳಗೊಂಡಂತೆ ಹಲವಾರು ಅಪರಾಧಗಳಲ್ಲಿ ಇವರೆಲ್ಲಾ ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂದು ಪಾಕಿಸ್ತಾನ ಆಂತರಿಕ ಸಚಿವಾಲಯ ಹೇಳಿದೆ. 
ಅರೇಬಿಯನ್ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಸಮುದ್ರ ಗಡಿ ಉಲ್ಲಂಘಿಸಿ ಪಾಕಿಸ್ತಾನದ ಗಡಿಯೊಳಗೆ ಅಕ್ರಮ ಪ್ರವೇಶಿಸಿದ್ದ ಆರೋಪದ ಮೇಲೆ ಭಾರತೀಯ ಮೀನುಗಾರರು ಬಂಧಿಯಾಗಿದ್ದಾರೆ. 
ಕಳೆದ ತಿಂಗಳು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ 55 ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಇನ್ನುಳಿದಂತೆ ಪಾಕಿಸ್ತಾನದ ಜೈಲಿನಲ್ಲಿ ಸೌಧಿ ಹಾಗೂ ಇಬ್ಬರು ಚೀನಾದ ಪ್ರಜೆಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. 
ಜಗತ್ತಿನ 100 ದೇಶಗಳಲ್ಲಿ 9,476 ಪಾಕಿಸ್ತಾನ ಪ್ರಜೆಗಳು ಬಂಧಿಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಲಾಹೋರ್ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com