ಜಾಗತಿಕ ಸೈಬರ್ ದಾಳಿಯ ಹಿಂದೆ ತನ್ನ ಕೈವಾಡವನ್ನು ತಳ್ಳಿ ಹಾಕಿದ ಉತ್ತರ ಕೊರಿಯಾ

ಉತ್ತರ ಕೊರಿಯಾವು ವಾನ ಕ್ರೈ ರಾನ್ಸಮ್ವೇರ್ ಜಾಗತಿಕ ಸೈಬರ್ ದಾಳಿಯ ಹಿಂದೆ ತನ್ನ ಕೈವಾಡವನ್ನು ನಿರಾಕರಿಸಿದೆ ಎಂದು ವಾಷಿಂಗ್ ಟನ್ ಹೇಳಿದೆ.
ವಾನ ಕ್ರೈ
ವಾನ ಕ್ರೈ
ಸಿಯೋಲ್: ಉತ್ತರ ಕೊರಿಯಾವು ವಾನ ಕ್ರೈ ರಾನ್ಸಮ್ವೇರ್ ಜಾಗತಿಕ ಸೈಬರ್ ದಾಳಿಯ ಹಿಂದೆ ತನ್ನ ಕೈವಾಡವನ್ನು ನಿರಾಕರಿಸಿದೆ ಎಂದು ವಾಷಿಂಗ್ ಟನ್ ಹೇಳಿದೆ. 
:ನಾವು ಅನೇಕ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ಸೈಬರ್ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅಮೆರಿಕದ ಕ್ರಮವು ಗಂಭೀರವಾದ ರಾಜಕೀಯ ಪ್ರಚೋದನೆಯಿಂದ ಕೂಡಿದೆ, ಅಂತರರಾಷ್ಟ್ರೀಯ ಸಮುದಾಯವನ್ನು ಡಿಪಿಆರ್ ಕೆ ವಿರುದ್ಧ ಎತ್ತಿ ಕಟ್ತುವ ಹುನ್ನಾರ ಇದರ ಹಿಂದಿದೆ, " ಎಂದು ಉತ್ತರ ಕೊರಿಯಾ ವಕ್ತಾರರು ಗಂಭೀರವಾದ ಆರೋಪ ಮಾಡಿದ್ದಾರೆ. 
ವಾರದ ಹಿಂದೆ ಶ್ವೇತಭವನವು ವಾನ ಕ್ರೈ ವೈರಸ್ ಸೃಷ್ಟಿಸಿ ಜಾಗತಿಕವಾಗಿ ಮಾಹಿತಿ ಕದಿಯುತ್ತಿದ್ದ ಜಾಲದ ಹಿಂದೆ ಉತ್ತರ ಕೊರಿಯಾ ಕೈವಾಡವಿದೆ ಎಂದು ದೂರಿತ್ತು.
ಕಳೆದ ಮೇ ತಿಂಗಳಲ್ಲಿ  ವಾನ ಕ್ರೈ ವೈರಸ್ ನಿಂದಾಗಿ 150 ದೇಶಗಳಲ್ಲಿ ಸುಮಾರು 300,000 ಕಂಪ್ಯೂಟರ್ ಗಳು ಹಾನಿಗೊಳಗಾಗಿದ್ದವು.  ಬಳಕೆದಾರ ಫೈಲ್ ಗಳನ್ನು ಹೈಜಾಕ್ ಮಾಡುವ ಈ ವೈರಸ್ ಅವುಗಳನ್ನು ಹಿಂಪಡೆಯಲು ಸಾವಿರಾರು ಡಾಲರ್ ಬೇಡಿಕೆ ಇಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com