ಪ್ಯಾಲೆಸ್ತೇನ್
ಪ್ಯಾಲೆಸ್ತೇನ್

ಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನ ಹೊಸ ಯೋಜನೆಗೆ ಪ್ಯಾಲೆಸ್ತೇನ್ ವಿರೋಧ

ಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನಿರ್ಮಿಸಲು ಉದ್ದೇಶಿಸಿರುವ 300,000 ಹೊಸ ವಸಾಹತು ಘಟಕಗಳ ಯೋಜನೆಗೆ ಪ್ಯಾಲೆಸ್ತೇನ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ರಾಮಲ್ಲಾಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನಿರ್ಮಿಸಲು ಉದ್ದೇಶಿಸಿರುವ 300,000 ಹೊಸ ವಸಾಹತು ಘಟಕಗಳ ಯೋಜನೆಗೆ ಪ್ಯಾಲೆಸ್ತೇನ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. 
ಶಾಂತಿ ಪ್ರಕ್ರಿಯೆಯ ಸಮಗ್ರವಾಗಿ ಪುನಃಪರಿಶೀಲಿಸುವುದನ್ನು ಪರಿಗಣಿಸುವ ಭರವಸೆ ನೀಡಿರುವ ಪ್ಯಾಲೆಸ್ತೇನ್, ಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನ ಹೊಸ ಯೋಜನೆಗಳು ಇಸ್ರೇಲ್ ನ ವಸಾಹತು ಹಾಗೂ  ವಿಸ್ತರಣಾವಾದದ ಯೋಜನೆಗಳಾಗಿದ್ದು ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯಾಗಿ ಘೋಷಿಸುವ ಅಮೆರಿಕದ ಹೇಳಿಕೆಯಿಂದ ಇಸ್ರೇಲ್ ನ ಸರ್ಕಾರ ಉತ್ತೇಜನ ಪಡೆದುಕೊಂಡಿದೆ ಎಂದು ಹೇಳಿದೆ. 
ಪ್ಯಾಲೆಸ್ತೇನ್ ನ ವಿಷಯದಲ್ಲಿ ಇಸ್ರೇಲ್ ಮುಂದಿನ ಯಾವುದೇ ಕ್ರಮ ತೆಗೆದುಕೊಂಡರೂ ಅದಕ್ಕೆ ಟ್ರಂಪ್ ಹೊಣೆಯಾಗಿರುತ್ತಾರೆ ಎಂದು ಪ್ಯಾಲೆಸ್ತೇನ್ ನ ವಿದೇಶಾಂಗ ಇಲಾಖೆ ಹೇಳಿದೆ.  

Related Stories

No stories found.

Advertisement

X
Kannada Prabha
www.kannadaprabha.com