ಕಾಶ್ಮೀರಿ ಚಿಲ್ಲಿ ಚಿಕನ್ ಸಮೋಸಾಗೆ ದಕ್ಷಿಣ ಆಫ್ರಿಕಾ ಪ್ರಶಸ್ತಿ

ದಕ್ಷಿಣ ಆಫ್ರಿಕಾದಲ್ಲಿ ನಡೆದ ಆಹಾರ ಉತ್ಪನ್ನಗಳ ಸ್ಪರ್ಧೆಯಲ್ಲಿ ಚಾಕೋಲೇಟ್, ಕ್ಯಾಶೂ ನಟ್ ಸೇರಿ ಇನ್ನಿತರೆ ತಿನಿಸುಗಳನ್ನು ಹಿಂದಿಕ್ಕಿದ ಭಾರತೀಯ ಚಿಲ್ಲಿ ‍ಚಿಕನ್ ಸಮೋಸ ಪ್ರಶಸ್ತಿ ಜಯಿಸಿದೆ.
ಸಮೋಸಾ
ಸಮೋಸಾ
ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ನಡೆದ ಆಹಾರ ಉತ್ಪನ್ನಗಳ ಸ್ಪರ್ಧೆಯಲ್ಲಿ ಚಾಕೋಲೇಟ್, ಕ್ಯಾಶೂ ನಟ್ ಸೇರಿ ಇನ್ನಿತರೆ ತಿನಿಸುಗಳನ್ನು ಹಿಂದಿಕ್ಕಿದ ಭಾರತೀಯ ಚಿಲ್ಲಿ ‍ಚಿಕನ್ ಸಮೋಸ ಪ್ರಶಸ್ತಿ ಜಯಿಸಿದೆ. ಈ ಸ್ಪರ್ಧೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಸಮುದಾಯದ ಮಾಲಿಕತ್ವದ ಅತಿದೊಡ್ಡ ರಾಷ್ಟ್ರೀಯ ದಿನಪತ್ರಿಕೆಯು ಆಯೋಜಿಸಿತ್ತು.
ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಬಗೆಬಗೆಯ ತಿನಿಸುಗಳು ಸ್ಪರ್ಧೆಯಲ್ಲಿದ್ದದ್ದು ಕಂಡುಬಂದಿತು. ಇದರಲ್ಲಿ ಬಾದಾಮಿ, ಗೋಡಂಬಿಗಳ ಚಾಕೋಲೇಟ್, ಚಾಕೋಲೆಟ್ ಒಳಗೊಂಡ ಗ್ಲಿಟರ್ ಖಾದ್ಯ, ಚಿಕನ್ ಪಿಜ್ಜಾಗಳೂ ಇದ್ದವು.
ದಕ್ಷಿಣ ಆಫ್ರಿಕಾದ ಭಾರತೀಯ ವಿಶೇಷ ಸಮೋಸಾ ಸಾಂಪ್ರದಾಯಿಕ ಪಂಜಾಬಿ ತಿನಿಸಾಗಿದ್ದು ಒಂದು ಖಾರ ಹಾಗೂ ಸಿಹಿ ಪದಾರ್ಥಗಳ ಹೂರಣಗಳೊಡನೆ ಗರಿಗರಿಯಾದ ಸಮೋಸಾಗಳು ಭಾರತದಲ್ಲಿ ಪ್ರಸಿದ್ದ ಖಾದ್ಯವಾಗಿದೆ. ಸಲ್ಮಾ ಅಗ್ನಿ  ಈ ಬಹುಮಾನಿತ ರೆಸಿಪಿಯನ್ನು ಕಳಿಸಿದ್ದರು.
"ನಾನು ಅಡಿಗೆಯನ್ನು ಪ್ರೀತಿಸುತ್ತೇನೆ. ಅದರಲ್ಲಿ ಹೊಸ ಪ್ರಯೋಗಗಳನ್ನು ಮಾಡುವಲ್ಲಿ ನಾನು ಸದಾಕಾಲ ಒಂದು ಹೆಜ್ಜೆ ಮುಂದಿರುತ್ತೇನೆ. ಈ ಸಮೋಸಾ ಫಿಲ್ಲಿಂಗ್ ಸಹ ನನ್ನ ಸ್ವಂತ ಅವಿಷ್ಕಾರವೇ ಆಗಿದೆ" ಸಲ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com