ಇರಾನ್ ಕ್ಷಿಪಣಿ ಪರೀಕ್ಷೆ ಬಗ್ಗೆ ಟ್ರಂಪ್ ಕಿಡಿ: ಎಚ್ಚರಿಕೆ

ಡೊನಾಲ್ಡ್ ಟ್ರಂಪ್ ಎಚ್ಚರಿಕೆಯನ್ನು ಲೆಕ್ಕಿಸದೇ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಇರಾನ್ ಬಗ್ಗೆ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಕ್ಷಿಪಣಿ ಪರೀಕ್ಷೆ ನಡೆಸಿದ ಇರಾನ್ ನನ್ನು ಅಧಿಕೃತವಾಗಿ ಗಮನಿಸುತ್ತೇವೆ ಎಂದು ಹೇಳಿದ್ದಾರೆ..
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಡೊನಾಲ್ಡ್ ಟ್ರಂಪ್ ಎಚ್ಚರಿಕೆಯನ್ನು ಲೆಕ್ಕಿಸದೇ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಇರಾನ್ ಬಗ್ಗೆ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಕ್ಷಿಪಣಿ ಪರೀಕ್ಷೆ ನಡೆಸಿದ ಇರಾನ್ ನನ್ನು ಅಧಿಕೃತವಾಗಿ ಗಮನಿಸುತ್ತೇವೆ ಎಂದು ಹೇಳಿದ್ದಾರೆ. 
ಅಮೆರಿಕ ಈ ಹಿಂದೆ ಇರಾನ್ ಗೆ 150 ಬಿಲಿಯನ್ ಡಾಲರ್ ಗಳ ನೆರವು ನೀಡದೇ ಇದ್ದಿದ್ದರೆ ಇರಾನ್ ಕುಸಿದು ಬೀಳುತ್ತಿತ್ತು. ಅಮೆರಿಕಾ ತನ್ನೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಇರಾನ್ ಕೃತಜ್ಞವಾಗಿರಬೇಕಿತ್ತು ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಇರಾನ್ ಕ್ಷಿಪಣಿ ಪರೀಕ್ಷೆ ನಡೆಸಿದ್ದರ ಬಗ್ಗೆ ಅಮೆರಿಕಾ ಯಾವ ಕ್ರಮ ಕೈಗೊಳ್ಳದೆ ಎಂಬುದನ್ನು ಶ್ವೇತ ಭವನ ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. 
ಕ್ಷಿಪಣಿಯನ್ನು ಪರೀಕ್ಷೆ ನಡೆಸಿರುವ ಇರಾನ್ ನ್ನು ಅಧಿಕೃತವಾಗಿ ನಿಗಾ ವಹಿಸಲಾಗುವುದು ಎಂದು ಹೇಳಿರುವ ಟ್ರಂಪ್, ಇರಾನ್ ನ ಅಣ್ವಸ್ತ್ರ ಒಪ್ಪಂದದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.  ಇರಾನ್ ಕ್ಷಿಪಣಿ ಪರೀಕ್ಷೆಯನ್ನು ಖಾತ್ರಿಪಡಿಸಿಲ್ಲವಾದರೂ ಅಮೆರಿಕಾದ ಅಧಿಕಾರಿಗಳು ಕ್ಷಿಪಣಿ ಪರೀಕ್ಷೆ ನಡೆದಿರುವುದನ್ನು ಸ್ಪಷ್ಟಪಡಿಸಿದ್ದಾರೆ. 
ಯುಎಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಇರಾನ್ ಭಾನುವಾರ ಮಧ್ಯಮ ದೂರದ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com