'ಈ ಮನುಷ್ಯ ವಂಚಕ': ಟ್ರಂಪ್ ಅವರನ್ನು ದೂಷಿಸಿದ ಸ್ಯಾಂಡರ್ಸ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಂಚಕ ಎಂದು ಕರೆದಿರುವ ವರ್ಮೌಂಟ್ ಸೆನೆಟರ್ ಬರ್ನಿ ಸ್ಯಾಂಡರ್ಸ್, ಮಧ್ಯಮ ವರ್ಗದ ಮತದಾರಿರಿಗೆ ನೀಡಿದ್ದ ಭರವಸೆಗಳನ್ನು ಕಡೆಗಣಿಸಿದ್ದು,
ಬರ್ನಿ ಸ್ಯಾಂಡರ್ಸ್ - ಡೊನಾಲ್ಡ್ ಟ್ರಂಪ್
ಬರ್ನಿ ಸ್ಯಾಂಡರ್ಸ್ - ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಂಚಕ ಎಂದು ಕರೆದಿರುವ ವರ್ಮೌಂಟ್ ಸೆನೆಟರ್ ಬರ್ನಿ ಸ್ಯಾಂಡರ್ಸ್, ಮಧ್ಯಮ ವರ್ಗದ ಮತದಾರಿರಿಗೆ ನೀಡಿದ್ದ ಭರವಸೆಗಳನ್ನು ಕಡೆಗಣಿಸಿದ್ದು, ಅಧ್ಯಕ್ಷರ ಸಂಪುಟ ಮತ್ತು ಸಲಹೆಗಾರರು ವಾಲ್ ಸ್ಟ್ರೀಟ್ ಗೆ ಸಂಬಂಧಿಸಿದವರು ಎಂದು ಕೂಡ ಆರೋಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
"ಈ ಮನುಷ್ಯ ವಂಚಕ" ಎಂದು ಅಮೆರಿಕಾ ಅಭ್ಯರ್ಥಿಯಾಗಲು ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿ ಹಿಲರಿ ಕ್ಲಿಂಟನ್ ಅವರಿಗೆ ಸೋತ ಸ್ಯಾಂಡರ್ಸ್ ಭಾನುವಾರ ಸಿಎನ್ಎನ್ ಗೆ ಹೇಳಿದ್ದಾರೆ. 
"'ನಾನು ಡೊನಾಲ್ಡ್ ಟ್ರಂಪ್, ವಾಲ್ ಸ್ಟ್ರೀಟ್ ವಿರುದ್ಧ ಸಮರ ಮಾಡಲಿದ್ದೇನೆ -- ಈ ಜನರು ಕೊಲೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದಾರೆ' ಎಂದು ಹೇಳಿಕೊಂಡು ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ವ್ಯಕ್ತಿ, ಈಗ ಸಂಪುಟಕ್ಕೆ ಎಲ್ಲ ಬಿಲಿಯನೇರ್ ಗಳನ್ನು ನೇಮಿಸುತ್ತಿದ್ದಾರೆ" ಎಂದು ಸ್ಯಾಂಡರ್ಸ್ ಹೇಳಿದ್ದಾರೆ. 
ಗೋಲ್ಡ್ ಮ್ಯಾನ್ ಸಾಕ್ಸ್ ಟ್ರೇಡರ್ ಮತ್ತು ಹೆಡ್ಜ್ ಫಂಡ್ ನಿರ್ವಾಹಕ ಸ್ಟೀವ್ ಮನುಚಿನ್ ಅವರನ್ನು ಟ್ರೆಶರಿ ಕಾರ್ಯದರ್ಶಿಯಾಗಿ ಟ್ರಂಪ್ ನೇಮಿಸಿದ್ದಾರೆ. ಹಾಗೆಯೇ ವಾಣಿಜ್ಯ ಇಲಾಖೆಯ ಮುಖ್ಯಸ್ಥರಾಗಿ ಬಿಲಿಯನೇರ್ ಮತ್ತು ಮಾಜಿ ಬ್ಯಾಂಕರ್ ವಿಲ್ಬರ್ ರಾಸ್ ಅವರನ್ನು ನೇಮಿಸಿರುವುದಲ್ಲದೆ, ಹಿರಿಯ ಗೋಲ್ಡ್ ಮ್ಯಾನ್ ಸಾಕ್ಸ್ ಅಧಿಕಾರಿ ಗ್ಯಾರಿ ಕಾಹ್ನ್ ಅವರನ್ನು ರಾಷ್ಟ್ರೀಯ ಆರ್ಥಿಕ ನೀತಿ ನಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. 
"ಅವರು ಒಳ್ಳೆಯ ಷೋಮ್ಯಾನ್ ಮತ್ತು ಟಿವಿ ಮನುಷ್ಯ" ಎಂದಿರುವ ಸ್ಯಾಂಡರ್ಸ್ "ಈ ದೇಶದ ಮಧ್ಯಮ ವರ್ಗ ಮತ್ತು ಕಾರ್ಮಿಕ ವರ್ಗವನ್ನು ಮಾರಿಬಿಡುತ್ತಾರೆ" ಎಂದು ಕೂಡ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com