ಗ್ರೀನ್ ಕಾರ್ಡುಗಳ ಸಂಖ್ಯೆ ಕಡಿತಗೊಳಿಸಲು ಅಮೆರಿಕಾ ಸೆನೆಟ್ ನಲ್ಲಿ ಮಸೂದೆ ಮಂಡನೆ; ಭಾರತೀಯ ಅಮೆರಿಕನ್ನರಿಗೆ ಆತಂಕ

ದೇಶಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೆರಿಕಾದ ಸೆನೆಟ್ ನಲ್ಲಿ ಶಾಸನವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ದೇಶಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೆರಿಕಾದ ಸೆನೆಟ್ ನಲ್ಲಿ ಶಾಸನವನ್ನು ಮಂಡಿಸಲಾಗಿದ್ದು, ಇದು ಅಲ್ಲಿನ ಗ್ರೀನ್ ಕಾರ್ಡು ಪಡೆದು ಅಮೆರಿಕಾದ ಖಾಯಂ ನಿವಾಸಿಗಳಾಗಬೇಕೆಂದು ಬಯಸುವವರಿಗೆ ಅಡ್ಡಿಯುಂಟಾಗಿದೆ. 
ರಿಪಬ್ಲಿಕನ್ ಸೆನೆಟರ್  ಟಾಮ್ ಕಾಟ್ಟನ್ ಮತ್ತು ಡೆಮಾಕ್ರಟಿಕ್ ಪಕ್ಷದ ಡೇವಿಡ್ ಪೆರ್ಡ್ಯು ಅವರು ಗ್ರೀನ್ ಕಾರ್ಡುಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ರೈಸ್ ಕಾಯ್ದೆಯನ್ನು ಜಾರಿಗೆ ತರಲು ಪ್ರಸ್ತಾವನೆ ನೀಡಿದ್ದಾರೆ. ಪ್ರಸ್ತುತ ಕಾನೂನುಬದ್ಧ ಖಾಯಂ ನಿವಾಸ ಕಾರ್ಡನ್ನು ಪ್ರತಿವರ್ಷ ಸುಮಾರು ಒಂದು ಲಕ್ಷ ಜನರಿಗೆ ಅಮೆರಿಕಾ ಸರ್ಕಾರ ನೀಡುತ್ತಿದ್ದು ಅದನ್ನು ಅರ್ಧದಷ್ಟು ಕಡಿಮೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಪ್ರಸ್ತಾವಿತ ಮಸೂದೆಗೆ ಡೊನಾಲ್ಡ್ ಟ್ರಂಪ್ ಆಡಳಿತದ ಬೆಂಬಲವಿದೆ ಎನ್ನಲಾಗುತ್ತಿದ್ದು, ಇದರಿಂದ ಉದ್ಯೋಗದ ಆಧಾರದ ಮೇಲೆ  ಗ್ರೀನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ನೂರಾರು ಭಾರತೀಯ ಅಮೆರಿಕನ್ನರಿಗೆ ಭಾರೀ ಪರಿಣಾಮ ಬೀರಲಿದೆ.
ಪ್ರಸ್ತುತ, ಭಾರತದಿಂದ ಅಮೆರಿಕಕ್ಕೆ ಹೋಗಿ ನೆಲೆಸಿ ಅಲ್ಲಿನ ಖಾಯಂ ನಿವಾಸಿ ಎಂದು ಗ್ರೀನ್ ಕಾರ್ಡು ಸಿಗಲು 10ರಿಂದ 35 ವರ್ಷಗಳವರೆಗೆ ಕಾಯಬೇಕಾಗಿದ್ದು, ಈ ಹೊಸ ಪ್ರಸ್ತಾವನೆ ಕಾನೂನಾಗಿ ಜಾರಿಗೆ ಬಂದರೆ ಭಾರತೀಯರು  ಅಮೆರಿಕಾದ ನಾಗರಿಕತ್ವ ಪಡೆಯಲು ಇನ್ನಷ್ಟು ವರ್ಷ ಕಾಯಬೇಕಾಗುತ್ತದೆ. ಈ ಮಸೂದೆಯಲ್ಲಿ ಹೆಚ್-1ಬಿ ವೀಸಾದ ಬಗ್ಗೆ ಹೇಳಿಲ್ಲ. 
ಆದರೆ ಈ ರೈಸ್ ಕಾಯ್ದೆ ಜಾರಿಗೆ ಬಂದರೆ ಅಲ್ಲಿ ಕೆಲಸ ಮಾಡುವ ನೌಕರರ ವೇತನ ಹೆಚ್ಚಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com