ವಾಷಿಂಗ್ ಟನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ, ಅಮೆರಿಕ ರಕ್ಷಣಾ ಕಾರ್ಯದರ್ಶಿ(ಸಚಿವ) ಜೇಮ್ಸ್ ಮಟ್ಟಿಸ್ ದೂರವಾಣಿ ಸಂಭಾಷಣೆ ನಡೆಸಿದ್ದು, ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ನಿರ್ಮೂಲನೆ ಮಾಡಲು ಬದ್ಧವಿರುವುದಾಗಿ ಬಜ್ವಾ ಭರವಸೆ ನೀಡಿದ್ದಾರೆ.
ಉಭಯ ನಾಯಕರು ಸೇನಾ ದ್ವಿಪಕ್ಷೀಯ ಬಾಂಧವ್ಯದ ಕುರಿತು ಮಾತನಾಡಿದ್ದಾರೆ, ಮಾತುಕತೆ ವೇಳೆ ಜನರಲ್ ಬಜ್ವಾ ಭಯೋತ್ಪಾದಕ ಸಂಘಟನೆಗಳ ನಿರ್ಮೂಲನೆಗೆ ಪಾಕಿಸ್ತಾನದ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ ಎಂದು ಪೆಂಟಗನ್ ಹೇಳಿಕೆ ಬಿಡುಗಡೆ ಮಾಡಿದೆ.
ಖೋರಾಸನ್ ಪ್ರಾಂಟ್ಯದಲ್ಲಿ ಐಎಸ್ಐಎಸ್ ಉಗ್ರ ಸಂಘಟನೆಯನ್ನು ನಿರ್ಮೂಲನೆ ಮಾಡಲು ಹಾಗೂ ಪಾಕಿಸ್ತಾನ ಸೇನೆ ಎಫ್ಎಟಿಎ ಪ್ರದೇಶಗಳಲ್ಲಿ ನಡೆಸಿರುವ ತ್ಯಾಗಕ್ಕೆ ಮಟ್ಟಿಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪೆಂಟಗನ್ ನ ವಕ್ತಾರರು ತಿಳಿಸಿದ್ದಾರೆ.