ಟ್ರಂಪ್ ವಲಸೆ ಆದೇಶಕ್ಕೆ ಅನುಮತಿ ನೀಡಲು ಫೆಡರಲ್ ಕೋರ್ಟ್ ನಕಾರ

ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ಪ್ರವೇಶಿಸುವುದಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದ ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ಜಾರಿಗೊಳಿಸುವುದಕ್ಕೆ ಅನುಮತಿ ನೀಡಲು ಅಮೆರಿಕಾದ ಫೆಡರಲ್ ಕೋರ್ಟ್ ನಿರಾಕರಿಸಿದೆ.
ಟ್ರಂಪ್ ವಲಸೆ ಆದೇಶಕ್ಕೆ ಅನುಮತಿ ನೀಡಲು ಫೆಡರಲ್ ಕೋರ್ಟ್ ನಕಾರ
ಟ್ರಂಪ್ ವಲಸೆ ಆದೇಶಕ್ಕೆ ಅನುಮತಿ ನೀಡಲು ಫೆಡರಲ್ ಕೋರ್ಟ್ ನಕಾರ
ವಾಷಿಂಗ್ ಟನ್: ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ಪ್ರವೇಶಿಸುವುದಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದ ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ಜಾರಿಗೊಳಿಸುವುದಕ್ಕೆ ಅನುಮತಿ ನೀಡಲು ಅಮೆರಿಕಾದ ಫೆಡರಲ್ ಕೋರ್ಟ್ ನಿರಾಕರಿಸಿದೆ. 
ಟ್ರಂಪ್ ಆದೇಶವನ್ನು ತಡೆಹಿದಿಡಿದ್ದ ಫೆಡರಲ್ ಕೋರ್ಟ್ ನ ನ್ಯಾಯಾಧೀಶರ ತ್ರಿಸದಸ್ಯ ಸಮಿತಿ ಆದೇಶವನ್ನು ಪುನರ್ ಸ್ಥಾಪಿಸಲು ನಿರಾಕರಿಸಿದ್ದು, ಡೊನಾಲ್ಡ್ ಟ್ರಂಪ್ ಆದೇಶದ ಹೊರತಾಗಿಯೂ ಇರಾನ್, ಇರಾಕ್, ಯೆಮೆನ್, ಲಿಬಿಯಾ, ಸುಡಾನ್, ಸೊಮಾಲಿಯಾದ ಪ್ರಜೆಗಳು ಅಮೆರಿಕಾ ಪ್ರವೇಶಿಸಬಹುದು ಎಂದು ಹೇಳಿದೆ. 
ಅಮೆರಿಕಾದ ಮೇಲೆ ಭಯೋತ್ಪಾದಕ ದಾಳಿ ನಡೆಸಿದವರ ಪೈಕಿ ಟ್ರಂಪ್ ಪಟ್ಟಿಯಲ್ಲಿರುವ 7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಲ್ಲ. ಆದ್ದರಿಂದ 7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಿಸದಂತೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿರುವುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com