ಚಾಕೊಲೆಟ್ ವಿಷಯದಲ್ಲಿ ಪಿಹೆಚ್ ಡಿ ಮಾಡಿ, ಮೋಂಡೆಲೀಸ್ ನಲ್ಲಿ ಕೆಲಸ ಪಡೆಯಿರಿ!

ಬ್ರಿಟನ್ ನ ವಿವಿಯೊಂದು ಚಾಕೊಲೇಟ್ ವಿಷಯದಲ್ಲಿಯೇ ಪಿಹೆಚ್ ಡಿ ಕೋರ್ಸ್ (ಚಾಕೋಲಿಕ್ಸ್) ನ್ನು ಪ್ರಾರಂಭಿಸಿದ್ದು, 15,000 ರೂ ಪೌಂಡ್ ಗಳಷ್ಟು ಅನುದಾನ ಘೋಷಿಸಿದೆ.
ಚಾಕೊಲೆಟ್ ವಿಷಯದಲ್ಲಿ ಪಿಹೆಚ್ ಡಿ ಮಾಡಿ, ಮೋಂಡೆಲೀಸ್ ನಲ್ಲಿ ಕೆಲಸ ಪಡೆಯಿರಿ!
ಚಾಕೊಲೆಟ್ ವಿಷಯದಲ್ಲಿ ಪಿಹೆಚ್ ಡಿ ಮಾಡಿ, ಮೋಂಡೆಲೀಸ್ ನಲ್ಲಿ ಕೆಲಸ ಪಡೆಯಿರಿ!
ಲಂಡನ್: ಬ್ರಿಟನ್ ನ ವಿವಿಯೊಂದು ಚಾಕೊಲೇಟ್ ವಿಷಯದಲ್ಲಿಯೇ ಪಿಹೆಚ್ ಡಿ ಕೋರ್ಸ್ (ಚಾಕೋಲಿಕ್ಸ್) ನ್ನು ಪ್ರಾರಂಭಿಸಿದ್ದು, 15,000 ರೂ ಪೌಂಡ್ ಗಳಷ್ಟು ಅನುದಾನ ಘೋಷಿಸಿದೆ. 
ಬ್ರಿಟನ್ ನ ಫೇವರೇಟ್ ಟ್ರೀಟ್ ಮೇಲೆ ಪ್ರಭಾವ ಬೀರುವ ವಂಶವಾಹಿಗಳ ಬಗ್ಗೆ ಅಧ್ಯಯನ ನಡೆಸಲು ವೆಸ್ಟ್ ಆಫ್ ಇಂಗ್ಲೆಂಡ್ ವಿವಿ ಕೋರ್ಸ್ ಗಾಗಿ ಅನುದಾನ ಘೋಷಿಸಿದೆ. ಕೋಕೋ ಬೀನ್ಸ್ ವ್ಯಕ್ತಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅಧ್ಯಯನ ಮಾಡುವುದಕ್ಕೆ ಈ ಕೋರ್ಸ್ ನಲ್ಲಿ ಅವಕಾಶ ನೀಡಲಾಗಿದೆ. 
ವಿವಿಧ ಕೋಕೋ ತಳಿಗಳ ಬಗ್ಗೆ ಹೆಚ್ಚಿನ ಆವಿಷ್ಕಾರ ಹಾಗೂ ವೈಜ್ಞಾನಿಕ ಮಾಹಿತಿಗಳಿಗಾಗಿ ಬೇಡಿಕೆ ಇರುವುದರಿಂದ ಕೋರ್ಸ್ ಪ್ರಾರಂಭಿಸಲಾಗಿದೆ. ಕೋರ್ಸ್ ಗೆ ಸೇರ್ಪಡೆಯಾಗಲು ಫೆ.27 ರ ವರೆಗೆ ಆರೋಗ್ಯ ಮತ್ತು ಅಪ್ಲೈಡ್ ಸೈನ್ಸಸ್ ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಕ್ಯಾಡ್ಬರಿ, ಮಿಲ್ಕಾ, ಪ್ರಿನ್ಸ್ ಮತ್ತು ಓರೆಯೋ ನಂತಹ ಕೋಕೋ ಬಳಸಿ ಸಿದ್ಧಪಡಿಸಲಾಗುವ ಸಿಹಿ ತಿನಿಸುಗಳನ್ನು ತಯಾರಿಸುವ ಮೋಂಡಲೀಜ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಹೆಚ್ಚಿನ ಉದ್ಯೋಗಾವಕಾಶಗಳು ಇರುವ ಬೆನ್ನಲ್ಲೇ ಬ್ರಿಟನ್ ನ ವಿವಿ ಚಾಕೊಲೇಟ್ ವಿಷಯದಲ್ಲಿಯೇ ಪಿಹೆಚ್ ಡಿ ಕೋರ್ಸ್ ನ್ನು ಪ್ರಾರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com