
ನವದೆಹಲಿ: ಪ್ರೇಮಿಗಳ ದಿನಾಚರಣೆಗೆ ಬೆದರಿಕೆಗಳ ಎಚ್ಚರಿಕೆಗಳು ಬರುತ್ತಿದ್ದು, ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡಿದರೆ ರುಂಡ ಕಡಿಯುತ್ತೇನೆಂದು ಇಸಿಸ್ ಮೌಲ್ವಿಯೊಬ್ಬ ಎಚ್ಚರಿಗೆ ನೀಡಿದ್ದಾನೆ.
ಕೆಂಪು ಬಣ್ಣದ ಟೆಡ್ಡಿ ಬೇರ್ ರುಂಡ ಕತ್ತರಿಸಿರುವ ಮೌಲ್ವಿಯೊಬ್ಬ ಅದನ್ನು ಮಸೀದಿಯೊಂದರ ಬಳಿ ಹಾಕಿದ್ದು, ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡಿದವರಿಗೆ ಟೆಡ್ಡಿ ಬೇರ್ ಗೆ ಎದುರಾದ ಪರಿಸ್ಥಿತಿ ಎದುರಾಗುತ್ತದೆ. ಆಚರಣೆ ಮಾಡಿದವರ ರುಂಡ ಕಡಿಯುತ್ತೇನೆಂದು ಎಚ್ಚರಿಸಿದ್ದಾನೆಂದು ತಿಳಿದುಬಂದಿದೆ.
ಈ ಬಗ್ಗೆ 'ದಿ ಹಿಂದೂ ಪತ್ರಿಕೆ' ವರದಿ ಮಾಡಿದ್ದು, ಉತ್ತರ ಇರಾಕಿನ ಮಸೀದಿಯೊಂದರ ಮುಂದೆ ಈ ರೀತಿಯ ಟೆಡ್ಡಿ ಬೇರ್ ಕಂಡು ಬಂದಿದೆ ಎಂದು ತಿಳಿಸಿದೆ.
ಪ್ರೇಮಿಗಳ ದಿನಾಚರಣೆಗೆ ನಾನಾ ಕಡೆಗಳಿಂದ ವಿರೋಧಗಳು ವ್ಯಕ್ತವಾಗುತ್ತಿದ್ದು, ನಿನ್ನೆಯಷ್ಟೇ ಪ್ರೇಮಿಗಳ ದಿನಾಚರಣೆ ಇಸ್ಲಾಂ ಧರ್ಮದ ಭಾಗವಲ್ಲ ಎಂದು ಹೇಳಿದ್ದ ಪಾಕಿಸ್ತಾನ ನ್ಯಾಯಾಲಯ ಪ್ರೇಮಿಗಳ ದಿನಾಚರಣೆಗೆ ನಿಷೇಧ ಹೇರಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ದಿನಾಚರಣೆ ಆಚರಣೆಯ ಮೇಲಿನ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಸರ್ಕಾರ ಮಾಧ್ಯಮಗಳಲ್ಲಿ ಪ್ರೇಮಿಗಳ ದಿನಾಚರಣೆ ಪ್ರೋತ್ಸಾಹಿಸುವಂಥ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡುವುದಿಲ್ಲ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲೂ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿತ್ತು.
Advertisement