ಉ.ಕೊರಿಯ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮಲ ಸಹೋದರನ ಹತ್ಯೆ ಆರೋಪಿ ಮಹಿಳೆ ಬಂಧನ

ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ಮಲ ಸಹೋದರನ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ..
ಕಿಮ್‌ ಜಾಂಗ್‌ ನಾಮ್‌
ಕಿಮ್‌ ಜಾಂಗ್‌ ನಾಮ್‌
ಕೌಲಾಲಂಪುರ: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ಮಲ ಸಹೋದರನ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಲೇಷ್ಯಾ ಪೊಲೀಸರು ಬುಧವಾರ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಉತ್ತರ ಕೊರಿಯದ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಮಲ ಸಹೋದರ ಕಿಮ್‌ ಜಾಂಗ್‌ ನಾಮ್‌ ಅವರನ್ನು ಮಹಿಳಾ ಏಜಂಟರು ವಿಷ ಉಣಿಸಿ ಸಾಯಿಸಿರುವುದು ದಕ್ಷಿಣ ಕೊರಿಯ ಗೂಢಚರ ಸಂಸ್ಥೆಗೆ ವಿಶ್ವಸನೀಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿತ್ತು.
ಘಟನೆ ನಡೆದ 24 ಗಂಟೆಯಲ್ಲೇ ಮಲೇಷ್ಯಾ ಪೊಲೀಸರು ವಿಯಟ್ನಾಂ ಪಾಸ್ ಪೊರ್ಟ್ ಹೊಂದಿರುವ ಮಹಿಳೆಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಕೌಲಾಲಂಪುರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕಿತ ಆರೋಪಿ 28 ವರ್ಷದ ದೋನ್ ತಿ ಎಂಬ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಮಲೇಷ್ಯಾ ಪೊಲೀಸ್ ಮುಖ್ಯಸ್ಥ ಖಾಲಿದ್ ಅಬುಬಕರ್ ಅವರು ಹೇಳಿದ್ದಾರೆ.
"ಕಿಮ್‌ ಜಾಂಗ್‌ ನಾಮ್‌ ಅವರ ಹತ್ಯೆಗೆ 2012ರಿಂದಲೂ ವಿಫ‌ಲ ಯತ್ನಗಳು ನಡೆಯುತ್ತಲೇ ಬಂದಿವೆ. ಉತ್ತರ ಕೊರಿಯದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ನ್ಯಾಮ್‌ ಅವರ ಹತ್ಯೆಗೆ ಆದೇಶ ನೀಡಿದ್ದರು ಎಂದು ಗುಪ್ತಚರ ಸಂಸ್ಥೆ ತಮಗೆ ತಿಳಿಸಿತ್ತು'ಎಂದು ದ.ಕೊರಿಯದ ಶಾಸಕರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com