ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 76 ಉಗ್ರರನ್ನು ಈಗಲೇ ಒಪ್ಪಿಸಿ; ಆಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಒತ್ತಡ

ಕರಾಚಿಯಲ್ಲಿ ಇಸಿಸ್ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ ಸರ್ಕಾರ ತನ್ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 76 ಉಗ್ರರನ್ನು ಕೂಡಲೇ ತಮಗೊಪ್ಪಿಸಬೇಕು ಎಂದು ಆಫ್ಘಾನಿಸ್ತಾನ ಸರ್ಕಾರದ ಮೇಲೆ ಒತ್ತಡ ಹಾಕಿದೆ.
ಕರಾಚಿ ಬಾಂಬ್ ಸ್ಫೋಟ
ಕರಾಚಿ ಬಾಂಬ್ ಸ್ಫೋಟ
Updated on: 

ಇಸ್ಲಾಮಾಬಾದ್: ಕರಾಚಿಯಲ್ಲಿ ಇಸಿಸ್ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ ಸರ್ಕಾರ ತನ್ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 76 ಉಗ್ರರನ್ನು ಕೂಡಲೇ  ತಮಗೊಪ್ಪಿಸಬೇಕು ಎಂದು ಆಫ್ಘಾನಿಸ್ತಾನ ಸರ್ಕಾರದ ಮೇಲೆ ಒತ್ತಡ ಹಾಕಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೂಫಿ ಸಂತರು ಕಾರ್ಯಕ್ರಮ ನಡೆಸುತ್ತಿದ್ದ ಮಸೀದಿ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ನಡೆಸಿದ ಭೀಕರ ದಾಳಿಯಿಂದಾಗಿ ಸುಮಾರು 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ಹಲವರು  ಗಾಯಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ಉಗ್ರ ದಾಳಿ ಇದಾಗಿದ್ದು, ಇದೇ ಕಾರಣಕ್ಕೆ ಪಾಕಿಸ್ತಾನ ಸರ್ಕಾರ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.  ಅಲ್ಲದೆ ಉಗ್ರರು ಆಫ್ಘಾನಿಸ್ತಾನ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿರುವ ಕುರಿತು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಟೊರ್ಕ್ಹಾಮ್ ಬಳಿ ಇರುವ ಗಡಿಯನ್ನು ಬಂದ್  ಮಾಡಲಾಗಿದೆ.

ಇನ್ನು ಆಫ್ಘಾನಿಸ್ತಾನ ಬುಡುಕಟ್ಟು ಪ್ರದೇಶಗಳಲ್ಲಿ ಅವಿತು ಕುಳಿತಿರುವ ಮತ್ತು ಪಾಕಿಸ್ತಾನ ಸರ್ಕಾರ ಮೋಸ್ಟ್ ವಾಂಟೆಡ್ ಉಗ್ರ ಪಟ್ಟಿಯಲ್ಲಿರುವ 76 ಉಗ್ರರನ್ನು ಆಫ್ಘನ್ ಸರ್ಕಾರ ಕೂಡಲೇ ತಮಗೊಪ್ಪಿಸಬೇಕು ಎಂದು ಪಾಕಿಸ್ತಾನ  ಆಫ್ಘನ್ ಮೇಲೆ ಒತ್ತಡ ಹಾಕಿದೆ. ಆಫ್ಘಾನಿಸ್ತಾನದ ಬುಡಕಟ್ಟು ಪ್ರದೇಶದಲ್ಲಿರುವ ಉಗ್ರರಿಂದಲೇ ಕರಾಚಿ ಬಾಂಬ್ ಸ್ಫೋಟ ನಡೆದಿರುವ ಶಂಕೆ ಇದ್ದು, ಇದೇ ಕಾರಣಕ್ಕೆ ಕೂಡಲೇ ಆಫ್ಘನ್ ಸರ್ಕಾರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ  76 ಉಗ್ರರನ್ನು ತಮಗೆ ಒಪ್ಪಿಸಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಸರ್ಕಾರ ಕೇವಲ ಗಡಿಯನ್ನು ಬಂದ್ ಮಾಡಿದ್ದಷ್ಟೇ ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಆಫ್ಘಾನಿಸ್ತಾನದೊಂದಿಗಿನ ವಾಣಿಜ್ಯ, ವ್ಯಾಪಾರ ವಹಿವಾಟುಗಳನ್ನೂ ತಾತ್ಕಾಲಿಕವಾಗಿ ಬಂದ್ ಮಾಡಿದೆ  ಎಂದೂ ತಿಳಿದುಬಂದಿದೆ. ನಿನ್ನೆಯಷ್ಟೇ ಕರಾಚಿಯ ಸೆಹ್ವಾನ್ ಟೌನ್ ನಲ್ಲಿರುವ ಶೆಹ್ಬಾಜ್ ಖಲಂದರ್ ಮಸೀದಿಯಲ್ಲಿ ಸೂಫಿಸಂತರು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಇಸಿಸ್ ನ ಆತ್ಮಹತ್ಯಾ ದಾಳಿಕೋರರು ಬಾಂಬ್ ದಾಳಿ  ನಡೆಸಿದ್ದರು. ಮಸೀದಿಯ ಗೇಟ್ ಬಳಿ ಸಾವಿರಾರು ಮಂದಿ ನೆರೆದಿದ್ದಾಗ ಉಗ್ರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ನೂರಾರು ಮಂದಿ ಸಾವಿಗೆ ಕಾರಣನಾಗಿದ್ದ. ಬಳಿಕ ದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ  ಸಂಘಟನೆ ಹೊತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com